ಹೊಸೂರಿನ ಮೃತ ಪೊಲೀಸ್ ಪೇದೆ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಘೋಷಿಸಿದ ಜಯಲಲಿತಾ

ಸರಗಳ್ಳರನ್ನು ಹಿಡಿಯಲು ಹೋಗಿ, ಕರ್ತವ್ಯದಲ್ಲಿದ್ದಾಗ ಇರಿತದಿಂದ ಮೃತಪಟ್ಟ ಹೊಸೂರಿನ ಪೊಲೀಸ್ ಪೇದೆ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ೧ ಕೋಟಿ ಪರಿಹಾರ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ

ಚೆನ್ನೈ: ಸರಗಳ್ಳರನ್ನು ಹಿಡಿಯಲು ಹೋಗಿ, ಕರ್ತವ್ಯದಲ್ಲಿದ್ದಾಗ ಇರಿತದಿಂದ ಮೃತಪಟ್ಟ ಹೊಸೂರಿನ ಪೊಲೀಸ್ ಪೇದೆ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ೧ ಕೋಟಿ ಪರಿಹಾರ ಘೋಷಿಸಿದ್ದಾರೆ.

ಕೃಷ್ಣಗಿರಿ ಜಿಲ್ಲೆಯಲ್ಲಿ ಜೂನ್ ೧೫ ರಂದು ಸಬ್ ಇನ್ಸ್ಪೆಕ್ಟರ್ ಮತ್ತು ಮುಖ್ಯ ಪೇದೆಗಳಾದ ಮುನಿಸ್ವಾಮಿ ಹಾಗೂ ಧನಪಾಲ್ ಅವರನ್ನು ಒಳಗೊಂಡ ತಂಡ ಶಂಕಿತ ಸರಗಳ್ಳರನ್ನು ಹಿಡಿಯಲು ಪ್ರಯತ್ನಿಸಿತ್ತು. ಆದರೆ ಶಂಕಿತರು ಮುನಿಸ್ವಾಮಿಗೆ ಇರಿದಿದ್ದರಿಂದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ವಿಧಾನಸಭೆಯಲ್ಲಿ ಜಯಲಲಿತಾ ಹೇಳಿದ್ದಾರೆ.

ಈಗ ಸದ್ಯಕ್ಕೆ ಇರುವ ನಿಯಮಗಳ ಪ್ರಕಾರ ಮುನಿಸ್ವಾಮು ಕುಟುಂಬಕ್ಕೆ ೫೦ ಲಕ್ಷ ರೂ ಪರಿಹಾರ ನೀಡಲು ಆದೇಶವಾಗಿತ್ತಾದರೂ ಈ ಮೊತ್ತ ಕುಟುಂಬಕ್ಕೆ ಸಮರ್ಥವಾಗುವುದಿಲ್ಲ ಎಂದಿರುವ ಮುಖ್ಯಮಂತ್ರಿ ಪರಿಹಾರವನ್ನು ೧ಕೋಟಿಗೆ ಹೆಚ್ಚಿಸಿ ಆದೇಶಿಸಿದ್ದಾರೆ.

ಜೊತೆಗೆ ಮುನಿಸ್ವಾಮಿ ಅವರ ಪುತ್ರಿ ರಕ್ಷಣಾ ಅವರ ಶಿಕ್ಷಣದ ಖರ್ಚು ವೆಚ್ಚವನ್ನು ಸರ್ಕಾರ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟವರಿಗೆ ಪರಿಹಾರವನ್ನು ಹೆಚ್ಚಿಸುವ ಹೊಸ ಮಸೂದೆಯನ್ನು ಸರ್ಕಾರ ರೂಪಿಸುವುದಾಗ ಜಯಲಲಿತಾ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶಂಕಿತ ಸರಗಳ್ಳ ಬೆಂಗಳೂರಿನ ಮೂರ್ತಿ ಪೊಲೀಸ್ ಕಸ್ಟಡಿಯಲ್ಲಿ ಎದೆನೋವಿನಿಂದ ಬಂಧನಗೊಂಡ ದಿನವೇ ಮೃತಪಟ್ಟಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com