ಕಚ್ ನಲ್ಲಿ ಮತ್ತೊಂದು ಪಾಕಿಸ್ತಾನಿ ಹಡಗು ಪತ್ತೆ

ಬಂಧೂಕುಗಳು ತುಂಬಿದ್ದ ಪಾಕಿಸ್ತಾನಿ ಹಡಗೊಂದು ಕಚ್ ಬಳಿ ಪತ್ತೆಯಾಗಿ, ವಶಪಡಿಸಿಕೊಂಡಿದ್ದ ಕೆಲವೇ ದಿನಗಳ ನಂತರ, ಮತ್ತೆ ಕೋಟೇಶ್ವರ್ ಪ್ರದೇಶದಲ್ಲಿ ತ್ಯಜಿಸಿ ಹೋಗಿದ್ದ ಮತ್ತೊಂದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಚ್: ಬಂಧೂಕುಗಳು ತುಂಬಿದ್ದ ಪಾಕಿಸ್ತಾನಿ ಹಡಗೊಂದು ಕಚ್ ಬಳಿ ಪತ್ತೆಯಾಗಿ, ವಶಪಡಿಸಿಕೊಂಡಿದ್ದ ಕೆಲವೇ ದಿನಗಳ ನಂತರ, ಮತ್ತೆ ಕೋಟೇಶ್ವರ್ ಪ್ರದೇಶದಲ್ಲಿ ತ್ಯಜಿಸಿ ಹೋಗಿದ್ದ ಮತ್ತೊಂದು ಪಾಕಿಸ್ತಾನಿ ಹಡಗು ಪತ್ತೆಯಾಗಿದೆ.

ಆಗ್ಗಾಗ್ಗೆ ಸಮುದ್ರದ ಗಡಿಯಲ್ಲಿ ಪಾಕಿಸ್ತಾನಿ ಹಡಗುಗಳು ಪತ್ತೆಯಾಗುತ್ತಿರುವುದು, ಸಮುದ್ರದ ಮೂಲಕ ಪಾಕಿಸ್ತಾನಿ ಉಗ್ರರು ನುಸುಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ ಎನ್ನಲಾಗಿದೆ.

ಈ ಮಧ್ಯೆ ಸೇನಾ ದಂಡುಪ್ರದೇಶದ ಫೋಟೋಗಳನ್ನು ಸೆರೆಹಿಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ ಕೊರಕಲು ಪ್ರದೇಶದಲ್ಲಿ ಜನವರಿಯಲ್ಲಿ ಅದೇ ಅಳತೆಯ ಮತ್ತೊಂದು ಹಡಗು ಪತ್ತೆಯಾಗಿತ್ತು. ಅಲ್ಲದೆ ಡಿಸೆಂಬರ್ ೨೦೧೫ರಲ್ಲಿ ಕೋಟೇಶ್ವರದ ಹತ್ತಿರವಿರುವ ಪಡ್ಡಾಲ ಕೊರಕಲು ಪ್ರದೇಶದಲ್ಲಿ ಅಂತಹುದೇ ಒಂದು ಮೀನುಗಾರಿಕಾ ಹಡಗು ಪತ್ತೆಯಾಗಿತ್ತು. ಮತ್ತು ನವೆಂಬರ್ ನಲ್ಲಿ ಕೂಡ ಕಚ್ ನ ಹರಾಮಿ ನಳ ಪ್ರದೇಶದಲ್ಲಿ ಪಾಕಿಸ್ತಾನದ ಎರಡು ಮೀನುಗಾರಿಕಾ ಹಡಗುಗಳು ಪತ್ತೆಯಾಗಿದ್ದವು.

ಪಾಕಿಸ್ತಾನದಿಂದ ಭಾರತದೆಡೆಗೆ ನೆಲದಿಂದ ೧೦ ಮೀಟರ್ ಕೆಳಗೆ ಕೊರೆಯಲಾಗಿದ್ದ ೩೦ ಮೀಟರ್ ಸುರಂಗ ಮಾರ್ಗವನ್ನು ಕೂಡ ಗಡಿ ಭದ್ರತಾ ಪಡೆಗಳು ಗುರುವಾರ ಪತ್ತೆ ಹಚ್ಚಿವೆ. ೨೦೧೨ ರಿಂದ ಪತ್ತೆಹಚ್ಚಲಾಗಿರುವ ಇಂತಹ ಸುರಂಗಗಳಲ್ಲಿ ಇದು ನಾಲ್ಕನೆಯದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com