ರೈಲ್ವೇ ಕ್ರಾಸಿಂಗ್ ಮುಕ್ತ ಹೆದ್ದಾರಿಗಾಗಿ ಮೋದಿ ಸರ್ಕಾರದ "ಸೇತು ಭಾರತಂ"

ಹೆಚ್ಚುತ್ತಿರುವ ರೈಲ್ವೇ ಕ್ರಾಸಿಂಗ್ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೂತನ ಯೋಜನೆ "ಸೇತು ಭಾರತಂ" ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್‌ನಿಂದ..
ಸೇತು ಭಾರತಂ ಯೋಜನೆ ಮಾದರಿ (ಸಂಗ್ರಹ ಚಿತ್ರ)
ಸೇತು ಭಾರತಂ ಯೋಜನೆ ಮಾದರಿ (ಸಂಗ್ರಹ ಚಿತ್ರ)

ನವದೆಹಲಿ: ಹೆಚ್ಚುತ್ತಿರುವ ರೈಲ್ವೇ ಕ್ರಾಸಿಂಗ್ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೂತನ ಯೋಜನೆ "ಸೇತು ಭಾರತಂ" ಕೈಗೊಂಡಿದ್ದು, ರಾಷ್ಟ್ರೀಯ  ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್‌ನಿಂದ ಮುಕ್ತಗೊಳಿಸಿ, ಪುರಾತನ ಸೇತುವೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಯೋಜನೆ ಉದ್ದೇಶವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಈ 'ಸೇತು ಭಾರತಂ' ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಯಿತು. ಈ ನೂತನ ಯೋಜನೆಯಡಿ,  ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿಯೇ ರೈಲು ಹಳಿ ಹಾದು ಹೋಗುವಂತಹ ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿ ಅಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಜತೆಗೆ  ಇದೇ ಯೋಜನೆಯಡಿಯಲ್ಲಿ ಬ್ರಿಟಿಷರ ಕಾಲದ 1,500 ಮೇಲ್ಸೇತುವೆಗಳನ್ನು ದುರಸ್ತಿಗೊಳಿಸಲಾಗುತ್ತದೆ. ಒಟ್ಟಾರೆ ದೇಶಾದ್ಯಂತ 208 ರೈಲ್ವೇ ಕ್ರಾಸಿಂಗ್‌ಗಳಲ್ಲಿ ಮೇಲ್ಸೇತುವೆಗಳನ್ನು  ನಿರ್ಮಿಸುವ ಮೂಲಕ 2019ರೊಳಗೆ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್‌ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

208 ಮೇಲ್ಸೇತುವೆಗಳ ಪೈಕಿ ಕರ್ನಾಟಕದಲ್ಲಿ 17 ಸೇತುವೆಗಳು ನಿರ್ಮಾಣವಾಗಲಿದ್ದು, ಈ ಮಹತ್ವಾಕಾಂಕ್ಷಿ "ಸೇತು ಭಾರತಂ" ಯೋಜನೆಗಾಗಿ ಕೇಂದ್ರ ಸರ್ಕಾರ ಒಟ್ಟು 50,800 ಕೋಟಿ ರು.  ಹಣವನ್ನು ಮೀಸಲಿರಿಸಿದೆ. ಈ ಪೈಕಿ ರೈಲ್ವೇ ಮೇಲ್ಸೇತುವೆಗೆ 20,800 ಕೋಟಿ ಹಾಗೂ ಸೇತುವೆಗಳ ದುರಸ್ತಿಗೆ 30,000 ಕೋಟಿ ರು. ಖರ್ಚಾಗಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com