ನವದೆಹಲಿ: ಬಡ ಜನರ, ಬುಡಕಟ್ಟು ಸಮುದಾಯದ ಮತ್ತು ಕೆಳ ವರ್ಗದ ಜನರ ಧ್ವನಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
"ಬಸ್ತರ್ ನ ಮತ್ತು ಚತ್ತೀಸ್ ಘರ್ ನ ಬುಡಕಟ್ಟು ಸಮುದಾಯದವರು ನನ್ನನ್ನು ಕಾಣಲು ಬಂದಿದ್ದರು. ಅವರನ್ನು ತುಳಿಯಲಾಗುತ್ತಿದೆ ಮತ್ತು ಬಿಜೆಪಿ ಸರ್ಕಾರ ಅವರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಅವರು ನನಗೆ ತಿಳಿಸಿದರು" ಎಂದು ಚತ್ತೀಸ್ ಘರ್ ನ ಬಸ್ತರ್ ನಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಬುಡಕಟ್ಟು ಸಮುದಾಯದ ಸಮಿತಿಯನ್ನು ಭೇಟಿ ಮಾಡಿದ ಮೇಲೆ ವರದಿಗಾರರಿಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ.
"ಸಂಸತ್ತಿನಲ್ಲಿ ಮೋದಿಯವರು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಿದರು. ಪ್ರತಿದಿನ ಅವರ ಪಕ್ಷದವರು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಾರೆ, ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ದಯವಿಟ್ಟು ಬಡ ಜನ ಮತ್ತು ಅವಕಾಶವಂಚಿತರ ಮೇಲೆ ದಾಳಿ ಮಾಡಬೇಡಿ" ಎಂದು ಕೂಡ ಅವರು ಹೇಳಿದ್ದಾರೆ.
ಬಡ ಜನರನ್ನು ಮತ್ತು ಸಾಧಾರಣ ವ್ಯಾಪಾರಸ್ಥರ ಮೇಲೆ ಕೂಡ ದಾಳಿ ನಡೆಸದಂತೆ ಬಿಜೆಪಿ ಪಕ್ಷಕ್ಕೆ ಗಾಂಧಿ ಆಗ್ರಹಿಸಿದ್ದಾರೆ.
Advertisement