ಕನ್ಹಯ್ಯ 'ಅಭಿವ್ಯಕ್ತಿ ಸ್ವಾತಂತ್ರ್ಯ' ಘೋಷಣೆಯನ್ನು ಸಹಿಸಿಕೊಳ್ಳುವುದಿಲ್ಲ ಎಂದ ಗೋವಾ ಮಂತ್ರಿ

"ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು" ಕನ್ಹಯ್ಯ ಕುಮಾರ್ ಅಂತವರು ಏನು ಬೇಕಾದರೂ ಮಾತನಾಡಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಗೋವಾ ಪರಿಸರ ಮತ್ತು
ಗೋವಾ ಪರಿಸರ ಮತ್ತು ಅರಣ್ಯ ಖಾತೆ ಸಚಿವ ರಾಜೇಂದ್ರ ಅರ್ಲೇಕರ್
ಗೋವಾ ಪರಿಸರ ಮತ್ತು ಅರಣ್ಯ ಖಾತೆ ಸಚಿವ ರಾಜೇಂದ್ರ ಅರ್ಲೇಕರ್

ಪಣಜಿ: "ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು" ಕನ್ಹಯ್ಯ ಕುಮಾರ್ ಅಂತವರು ಏನು ಬೇಕಾದರೂ ಮಾತನಾಡಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಗೋವಾ ಪರಿಸರ ಮತ್ತು ಅರಣ್ಯ ಖಾತೆ ಸಚಿವ ರಾಜೇಂದ್ರ ಅರ್ಲೇಕರ್ ಹೇಳಿದ್ದಾರೆ.

"ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ತಿಳಿದು, ಕನ್ಹಯ್ಯ ನಂತಹ ವ್ಯಕ್ತಿ ಏನು ಬೇಕಾದರೂ ಮಾತನಾಡಬಹುದು ಎಂದು ಕೆಲವು ತಿಳಿದುಕೊಂಡಿದ್ದರೆ... ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ನೆಹರು ಯುವ ಕೇಂದ್ರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವಕರಿದ್ದ ಸಭೆಯನ್ನುದ್ದೇಶಿಸಿ ಅರ್ಲೇಕರ್ ಶುಕ್ರವಾರ ಮಾತನಾಡಿದ್ದಾರೆ.

"ಇವೆಲ್ಲ ಚಿಂತನೆಗಳೂ ಎಡ ಪಕ್ಷಗಳ ಚಿಂತನೆಯಿಂದ ಬಂದಿರುವಂತಾದ್ದು. ಇದರ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಓದುವುದು ಅವಶ್ಯಕ. ಎಡಪಂಥೀಯತೆ ನಮ್ಮನ್ನು ಎತ್ತ ಕಡೆಗೆ ತೆಗೆದುಕೊಂಡು ಹೋಗುತ್ತಿದೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವುದು ಮುಖ್ಯ.,, ಈ ಎಡಪಂಥೀಯತೆ ನಮ್ಮನ್ನು ಸರಿದಾರಿಯಲ್ಲಿ ಕರೆದೊಯ್ಯುತ್ತಿದೆಯೇ" ಎಂದು ಸಚಿವರು ಹೇಳಿದ್ದಾರೆ.

ಫೆಬ್ರವರಿ ೧೨ ರಂದು ದೇಶದ್ರೋಹದ ಆರೋಪದ ಮೇಲೆ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು.

"ಏನಿದು ಅಭಿವ್ಯಕ್ತಿ ಸ್ವಾತಂತ್ರ್ಯ? ಇದರ ಅರ್ಥ ನೀವು ಏನು ಬೇಕಾದರೂ ಮಾತನಾಡುವುದು ಎಂಬುದೇ? ಈ ಕಾರ್ಯಕ್ರಮ ಆದಮೇಲೆ ನಾನು ರಸ್ತೆಯಲ್ಲಿ ನಡೆದು ಎಲ್ಲರನ್ನು ಬೈದಾಡುತ್ತೇನೆ. ಇದು ಅಭಿವ್ಯಕ್ತಿ ಸ್ವಾತಂತ್ರವೇ? ಇತರ ಜನರ ಹಕ್ಕುಗಳಿಗೆ ರಕ್ಷಣೆಯಿಲ್ಲವೇ? ಇತರ ಜನರ ಹಕ್ಕುಗಳ ರಕ್ಷಣೆಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಸಂಬಂಧವಿದೆ" ಎಂದ ಅವರು ಕನ್ಹಯ್ಯ ಅವರ ಹೋರಾಟದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಟೀಕಾ ಪ್ರಹಾರ ಮಾಡಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com