ದೆಹಲಿ ಬಜೆಟ್: ಪುರಸಭೆಗಳಿಗೆ ೧೦೦೦ಕೋಟಿ ಹೆಚ್ಚುವರಿ ಅನುದಾನ

ದೆಹಲಿ ಪುರಸಭೆಗಳಿಗೆ ಹೆಚ್ಚುವರಿ ೧೦೦೦ ಕೋಟಿ ರೂ ಅನುದಾನ ನೀಡುವುದಾಗಿ ದೆಹಲಿ ವಿತ್ತ ಸಚಿವ ಮನೀಶ್ ಸಿಸೋದಿಯಾ ಸೋಮವಾರ ಘೋಷಿಸಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಪುರಸಭೆಗಳಿಗೆ ಹೆಚ್ಚುವರಿ ೧೦೦೦ ಕೋಟಿ ರೂ ಅನುದಾನ ನೀಡುವುದಾಗಿ ದೆಹಲಿ ವಿತ್ತ ಸಚಿವ ಮನೀಶ್ ಸಿಸೋದಿಯಾ ಸೋಮವಾರ ಘೋಷಿಸಿದ್ದಾರೆ.

"ಕಳೆದ ವರ್ಷ ದೆಹಲಿ ಪುರಸಭೆಗಳಿಗೆ ಬಜೆಟ್ ಅನುದಾನ ೫೯೦೮ಕೋಟಿ ಇತ್ತು. ಇದನ್ನು ನಂತರ ೫೯೯೯ಕೋಟಿಗೆ ಏರಿಸಲಾಯಿತು. ಈ ವರ್ಷ ಇದನ್ನು ೬೯೧೯ ಕೋಟಿಗೆ ಹೆಚ್ಚಿಸಲು ನಿರ್ಧರಿಸಿದ್ದೇವೆ" ಎಂದು ದೆಹಲಿ ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಸಿಸೋದಿಯಾ ಹೇಳಿದ್ದಾರೆ.

ಬಿಜೆಪಿ ನಿಯಂತ್ರಣದಲ್ಲಿರುವ ಪುರಸಭೆಗಳನ್ನುದ್ದೇಶಿಸಿ, ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಆಗ್ರಹಿಸಿದ್ದಾರೆ.

"ಈ ಹಣವನ್ನು ಸರಿಯಾಗಿ ಉಪಯೋಗಿಸಿಕೊಂಡು, ಪುರಸಭೆಗಳು ತಮ್ಮ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಲಿದ್ದಾರೆ ಎಂದು ನಂಬುತ್ತೇನೆ. ಇದು ಸಾರ್ವಜನಿಕರ ಹಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿ ಈ ಹಣವನ್ನು ಪೋಲು ಮಾಡಬಾರದು" ಎಂದು ಕಿವಿಮಾತು ಹೇಳಿದ್ದಾರೆ.

ದೆಹಲಿಯಲ್ಲಿ ವೈಫೈ ಸೌಕರ್ಯದ ಬಗ್ಗೆ ಮಾತನಾಡಿದ ಅವರು ಈಗಿನ ಯೋಜನೆಗಳನ್ನು ಪರಿಶೀಲಿಸಿ ಇನ್ನೂ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲಿದ್ದೇವೆ ಎಂದು ತಿಳಿಸಿದ್ದಾರೆ. "ಬಸ್ ಗಳಲ್ಲಿ ಮತ್ತು ಕೆಲವು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ವೈಫೈ ಸೇವೆಯನ್ನು ಒದಗಿಸುತ್ತಿದ್ದೇವೆ. ಈ ಯೋಜನೆಗಳು ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಇನ್ನೂ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲಿದ್ದೇವೆ" ಎಂದು ಮನೀಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com