ತೃತೀಯಲಿಂಗಿಗಳಿಗೆ ಉದ್ಯೋಗ ಮೀಸಲಾತಿ ವಿಸ್ತರಿಸಿದ ಬಿಹಾರ

ತೃತೀಯಲಿಂಗಿಗಳಿಗೆ ಉದ್ಯೋಗ ಮೀಸಲಾತಿ ಮತ್ತು ಅವರಿಗಾಗಿ ಕ್ಷೇಮಾಭಿವೃದ್ಧಿ ಮಂಡಲಿ ಸ್ಥಾಪಿಸುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ತೃತೀಯಲಿಂಗಿಗಳಿಗೆ ಉದ್ಯೋಗ ಮೀಸಲಾತಿ ಮತ್ತು ಅವರಿಗಾಗಿ ಕ್ಷೇಮಾಭಿವೃದ್ಧಿ ಮಂಡಲಿ ಸ್ಥಾಪಿಸುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.

"ಸರ್ಕಾರಿ ಉದ್ಯೋಗಗಳಲ್ಲಿ ತೃತೀಯಲಿಂಗಿಗಳಿಗೆ ಮೀಸಲಾತಿ ನೀಡಲಾಗುವುದು ಹಾಗೂ ಬಿಹಾರ ರಾಜ್ಯ ಕಲ್ಯಾಣ ಮಂಡಲಿಯನ್ನು ಸ್ಥಾಪಿಸಲಾಗುವುದು" ಎಂದು ಬಿಹಾರದ ಸಮಾಜಿಕ ಅಭಿವೃದ್ಧಿ ಸಚಿವ ಮಂಜು ವರ್ಮಾ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

ಕಳೆದ ವರ್ಷ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಂಗಳಮುಖಿಯರನ್ನು ತೃತೀಯಲಿಂಗಿಗಳೆಂದು ಗುರುತಿಸಿ, ಅವರು ಮುಖ್ಯವಾಹಿನಿಯ ಭಾಗವಾಗಲೆಂಬ ಭರವಸೆಯಿಂದ ಅವರಿಗಾಗಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಉದ್ಯೋಗ ಮೀಸಲಾತಿ ಕಲ್ಪಿಸಲಾಗುತ್ತಿದೆ.

ಕಳೆದ ವರ್ಷ ರಾಜ್ಯ ಸರ್ಕಾರ ಅವರನ್ನು ತೃತೀಯಲಿಂಗಿಗಳೆಂದು ಗುರುತಿಸಿ, ಅವರನ್ನು ಅನೆಕ್ಷರ್ ೧೧, ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿತ್ತು.

ಈಗ ಅಧಿಕಾರಿಗಳ ಪ್ರಕಾರ ಇನ್ನು ಮುಂದೆ ತೃತೀಯಲಿಂಗಿಗಳನ್ನು ಹಿಂದುಳಿದ ವರ್ಗಗಳ ಸ್ಕೆಡ್ಯೂಲ್ ೨ ಕ್ಕೆ ಸೇರಿಸಿ ಅದರ ನಿಯಮಗಳಂತೆ ಅವರಿಗೆ ಮೀಸಲಾತಿ ಕಲ್ಪಿಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com