'2 ವರ್ಷ ಮೋದಿ ಸರ್ಕಾರ' ಪ್ರಚಾರಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಯೋಜನೆ

ಮೇ ೨೬ ಕ್ಕೆ ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳ ಆಡಳಿತ ಪೂರೈಸಲಿದ್ದು, ಸಾಧನೆಗಳ ಪ್ರಚಾರಕ್ಕೆ ಯೋಜನೆ ರೂಪಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ...
ಮೋದಿ ಸರ್ಕಾರ ಒಂದು ವರ್ಷ ತುಂಬಿದ ಸಮಯದಲ್ಲಿ ಮಾಡಿದ ಪ್ರಚಾರ ಭಿತ್ತಿಚಿತ್ರ
ಮೋದಿ ಸರ್ಕಾರ ಒಂದು ವರ್ಷ ತುಂಬಿದ ಸಮಯದಲ್ಲಿ ಮಾಡಿದ ಪ್ರಚಾರ ಭಿತ್ತಿಚಿತ್ರ

ನವದೆಹಲಿ: ಮೇ ೨೬ ಕ್ಕೆ ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳ ಆಡಳಿತ ಪೂರೈಸಲಿದ್ದು, ಸಾಧನೆಗಳ ಪ್ರಚಾರಕ್ಕೆ ಯೋಜನೆ ರೂಪಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇತರ ಸಚಿವಾಲಯಗಳನ್ನು ಸಂಪರ್ಕಿಸತೊಡಗಿದೆ.

ಕಳೆದ ೧೮ ತಿಂಗಳಲ್ಲಿ ತಾವು ಕೈಗೊಂಡಿರುವ ಯೋಜನೆಗಳ ಮಾಹಿತಿ ಕೇಳಿ ಸಚಿವಾಲಯ ಇತರ ಇಲಾಖೆಗಳಿಗೆ ಪತ್ರ ಬರೆದಿದೆ. "ಸರ್ಕಾರ ಒಂದು ವರ್ಷ ತುಂಬಿದಾಗ, 'ಸಾಲ್ ಏಕ್ ಶುರುವಾತ್ ಅನೇಕ್' (ವರ್ಷ ಒಂದು, ಪ್ರಾರಂಭಗಳು ಅನೇಕ) ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಲಾಗಿತ್ತು. ಈಗ ದೂರದರ್ಶನ, ವಿವಿಧಭಾರತಿ, ಪ್ರೆಸ್ ಇನ್ಫರ್ಮೇಶನ್ ಬ್ಯೂರೊ ಮತ್ತು ಇತರ ಸಚಿವಾಲಯಗಳನ್ನು ಒಳಗೊಂಡಂತೆ ವಿವರವಾದ ಪ್ರಚಾರ ಕಾರ್ಯ ರೂಪಿಸುವ ಸಾಧ್ಯತೆಯಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ತಿಂಗಳ ಮೊದಲ ಭಾಗದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋರ್ ಸಭೆ ನಡೆಸಿ, ಬೇರೆ ಇಲಾಖೆಗಳು ಮತ್ತು ಸಚಿವಾಲಯಗಳಿಂದ ಪ್ರಚಾರ ಅಧಿಕಾರಿಗಳಿಗೆ ಸುಲಭವಾಗಿ ಮಾಹಿತಿ ದೊರೆಯುವಂತಾಗಲು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ.

ದೂರದರ್ಶನವೂ ಸೇರಿದಂತೆ ಸಚಿವಾಲಯದಡಿಯಲ್ಲಿ ಬರುವ ಎಲ್ಲ ಪ್ರಚಾರ ಇಲಾಖೆಗಳಿಗೆ ಪ್ರಮುಖ ನೀತಿಗಳ ಪ್ರಚಾರಕ್ಕೆ ಕಾರ್ಯಕ್ರಮ ರೂಪಿಸಲು ಸೂಚಿಸಲಾಗಿದೆ. ಇದಕ್ಕಾಗಿ ಹೊರಗಿನಿಂದ ವೃತ್ತಿಪರರ ಸಹಾಯ ತೆಗೆದುಕೊಳ್ಳಲು ಚಿಂತಿಸುತ್ತಿದೆ ಎನ್ನಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com