ವಿಮಾನ ದುರಂತದಲ್ಲಿ ನೇತಾಜಿ ಸಾವನ್ನಪ್ಪಿಲ್ಲ; ಈ ಘಟನೆ ನಂತರ ಅವರು ರೇಡಿಯೋ ಸಂದೇಶವನ್ನೂ ನೀಡಿದ್ದರು!

ಕಡತಗಳಲ್ಲಿ ನೇತಾಜಿಯವರು 1945ರ ವಿಮಾನ ದುರಂತದಲ್ಲಿ ಅವರು ಸಾವಿಗೀಡಾಗಿಲ್ಲ, ಅವರು ಬದುಕಿದ್ದರು ಎಂದು ಹೇಳಲಾಗಿದೆ...
ನೇತಾಜಿ ಸುಭಾಷ್ ಚಂದ್ರ ಬೋಸ್
ನೇತಾಜಿ ಸುಭಾಷ್ ಚಂದ್ರ ಬೋಸ್
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಕೆಲವೊಂದು ಕಡತಗಳನ್ನು ನರೇಂದ್ರ ಮೋದಿಯವರ ಸರ್ಕಾರ ಮಂಗಳವಾರ ಬಹಿರಂಗ ಪಡಿಸಿದೆ. ಈ ಕಡತಗಳಲ್ಲಿ ನೇತಾಜಿಯವರು 1945ರ ವಿಮಾನ ದುರಂತದಲ್ಲಿ ಅವರು ಸಾವಿಗೀಡಾಗಿಲ್ಲ, ಅವರು ಬದುಕಿದ್ದರು ಎಂದು ಹೇಳಲಾಗಿದೆ.
ಈ ಕಡತಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ, ಆಗಸ್ಟ್ 18, 1945 ವಿಮಾನ ಅಪಘಾತದ ನಂತರ ನೇತಾಜಿಯವರು ಮೂರು ಬಾರಿ ರೇಡಿಯೋದಲ್ಲಿ ಸಂದೇಶ ನೀಡಿದ್ದರು. ಬಂಗಾಳದ ಗವರ್ನರ್ ಹೌಸ್‌ನ ಮಾನಿಟರಿಂಗ್ ಸರ್ವೀಸ್ ರೇಡಿಯೋ ಸಂದೇಶವನ್ನು ಸ್ವೀಕರಿಸಿತ್ತು.
ನೇತಾಜಿಯವರು 1945 ಡಿಸೆಂಬರ್ 26ರಂದು ಅವರು ಮೊದಲ ಸಂದೇಶ ಕಳಿಸಿದ್ದು, ಜನವರಿ 1946 ಮತ್ತು ಫೆಬ್ರವರಿ 1946 ರಲ್ಲಿ ಎರಡು ಮತ್ತು ಮೂರನೆಯ ಸಂದೇಶವನ್ನು ಕಳುಹಿಸಿದ್ದರು.
ಮೊದಲ ರೇಡಿಯೋ ಸಂದೇಶದಲ್ಲಿ ಅವರು ವಿಶ್ವದ ಅತೀ ಪ್ರಬಲ ಶಕ್ತಿಯ ಕೆಳಗಿದ್ದೀನಿ ಎಂದು ಹೇಳಿದ ಅವರು ತಾನು ಭಾರತಕ್ಕೆ ವಾಪಸ್ ಆಗುತ್ತೇನೆ ಎಂದಿದ್ದರು.
ಜನವರಿ 1, 1946ರಂದು ಕಳಿಸಿದ ಸಂದೇಶದಲ್ಲಿ ನೇತಾಜಿಯವರು ಎರಡು ವರ್ಷಗಳೊಳಗೆ ಭಾರತ ಸ್ವಾತಂತ್ರ್ಯವನ್ನು ಪಡೆಯಲೇಬೇಕು ಎಂಬ ಕರೆಯನ್ನು ನೀಡಿದ್ದರು. ಅದೇ ವೇಳೆ ಬರೀ ಅಹಿಂಸೆಯಿಂದ ಮಾತ್ರ ಭಾರತ ಸ್ವತಂತ್ರಗೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು ಎಂದು ಕಡತಗಳಲ್ಲಿ ಉಲ್ಲೇಖವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com