ಮೋದಿ ಸರ್ಕಾರ ಅಸ್ಥಿರಕ್ಕೆ ದಾವೂದ್ ಯತ್ನ; ಆರ್ ಎಸ್ ಎಸ್ ಮತ್ತು ಚರ್ಚ್ ಗಳ ಮೇಲೆ ದಾಳಿಗೆ ಸಂಚು!

ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹವಣಿಸುತ್ತಿದ್ದು, ಇದಕ್ಕಾಗಿ ದೇಶದ ಕೋಮು ಸಾಮರಸ್ಯವನ್ನು ಕದಡುವ ಮೂಲಕ ವಿಧ್ವಂಸಕ ಕೃತ್ಯ ನಡೆಸಲು ..
ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ)
ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ)
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹವಣಿಸುತ್ತಿದ್ದು, ಇದಕ್ಕಾಗಿ ದೇಶದ ಕೋಮು ಸಾಮರಸ್ಯವನ್ನು ಕದಡುವ ಮೂಲಕ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಎನ್ ಐಎ ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿರುವ ದಾವೂದ್ ಇಬ್ರಾಹಿಂ ಸಹಚರರು ಆರ್​ಎಸ್​ಎಸ್ ನಾಯಕರು ಮತ್ತು ಚರ್ಚ್​ಗಳ ಮೇಲೆ ದಾಳಿ ನಡೆಸಿ ಕೋಮು ಸಾಮರಸ್ಯವನ್ನು  ಕದಡಲು ಸಂಚು ರೂಪಿಸುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ತಿಳಿಸಿದೆ. ದಾವೂದ್ ಗೆ ಗ್ಯಾಂಗ್ ಗೆ ಸೇರಿದ 10 ಮಂದಿ ಕ್ರಿಮಿನಲ್ ಗಳ ವಿರುದ್ಧ ಜನರ ವಿರುದ್ಧ ಇದೇ  ಶನಿವಾರ ಎನ್​ಐಎ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದು, ಚಾರ್ಚ್ ಶೀಟ್ ನಲ್ಲಿ ಡಿ-ಕಂಪನಿ ಸಂಚಿನ ಬಗ್ಗೆ ವಿವರಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ದಾವೂದ್ ಹೊಂಚು ಹಾಕುತ್ತಿದ್ದಾನೆ. ಇದೇ ಕಾರಣಕ್ಕಾಗಿ  ಹಲವು ದಾವೂದ್ ಹಲವು ನುರಿತ ಶಾರ್ಪ್ ಶೂಟರ್ ಗಳನ್ನು ಭಾರತದಲ್ಲಿ ನೇಮಿಸಿದ್ದು, ಆರ್ ಎಸ್ ಎಸ್ ನ ಹಿರಿಯ ನಾಯಕರನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ನಡೆಸಲು ಸೂಚನೆ  ನೀಡಿದ್ದಾನೆ. ಆ ಮೂಲಕ ದೇಶದಲ್ಲಿ ಕೋಮು ಸಾಮರಸ್ಯ ಕದಡಿ, ದೇಶದಲ್ಲಿ ಅಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಆತನ ಸಂಚಾಗಿದೆ ಎಂದು ಎನ್ ಐಎ ತನ್ನ ಚಾರ್ಜ್ ಶೀಟ್ ನಲ್ಲಿ  ದಾಖಲಿಸಿದೆ.

ಇನ್ನು 2015ರ ಬಲಪಂಥೀಯ ನಾಯಕರಾದ ಶಿರಿಶ್ ಬೆಂಗಾಲಿ ಮತ್ತು ಪ್ರಗ್ನೇಶ್ ಮಿಸ್ತಿ ಅವರ ಹತ್ಯೆ ಸಂಬಂಧ ತನಿಖೆ ನಡೆಸಿದ್ದ ಎನ್ ಐಎ ಈ ದಾಳಿಯಲ್ಲಿ ದಾವೂದ್ ಗ್ಯಾಂಗ್ ನ ಇಬ್ಬರ  ಕೈವಾಡದ ಕುರಿತು ಮಾಹಿತಿ ಕಲೆಹಾಕಿತ್ತು. ಬಳಿಕ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶಾರ್ಪ್ ಶೂಟರ್ ಗಳು ಬಳಿಕ ತಪ್ಪೊಪ್ಪಿಕೊಂಡು 1993ರ ಸರಣಿ ಸ್ಫೋಟ ರೂವಾರಿ ಯಾಕೂಬ್  ಮೆಮನ್ ನನ್ನು ಗಲ್ಲಿಗೇರಿಸಿದ ಸೇಡಿನ ಪ್ರತೀಕವಾಗಿ ಇವರನ್ನು ಕೊಲ್ಲಲಾಗಿದೆ ಎಂದು ಹೇಳಿದ್ದ ವಿಚಾರವನ್ನು ಎನ್ ಐಎ ಚಾರ್ಜ್ ಶೀಟ್ ನಲ್ಲಿ ನಮೂದಿಸಿದೆ.

ಅಂತೆಯೇ ಡಿ-ಕಂಪನಿಯ ಸದಸ್ಯರಾದ ಪಾಕಿಸ್ತಾನ ಮೂಲದ ಜಾವೆದ್ ಚಿಕ್ನ ಮತ್ತು ದಕ್ಷಿಣ ಆಫ್ರಿಕಾ ಮೂಲದ ಝಹೀದ್ ಮಿಯಾನ್ ಅಲಿಯಾಸ್ ಜವೋ ಅವರು ಈ ಕೃತ್ಯಕ್ಕಾಗಿ  ನೇಮಕಗೊಂಡಿದ್ದು, ಕೇವಲ ಆರ್ ಎಸ್ ಎಸ್ ನಾಯಕರ ಹತ್ಯೆಯಷ್ಟೇ ಅಲ್ಲದೇ ಚರ್ಚ್ ಗಳ ಮೇಲೆ ದಾಳಿ ನಡೆಸುವ ಮೂಲಕ ದೇಶದಲ್ಲಿ ಕೋಮುದಳ್ಳುರಿಗೆ ನಾಂದಿಹಾಡಲು ಇವರನ್ನು  ನೇಮಿಸಲಾಗಿದೆ ಎಂದು ಎನ್ ಐಎ ಚಾರ್ಜ್ ಶೀಟ್ ನಲ್ಲಿ ಮಾಹಿತಿ ನೀಡಿದೆ.

ಚಿಕ್ನ, ಜವೋ ಬಂಧನಕ್ಕೆ ಇಂಟರ್ ಪೋಲ್ ನೆರವು ಕೇಳಿದ ಎನ್ ಐಎ
ಇನ್ನು ಡಿ-ಕಂಪನಿಯ ಪ್ರಮುಖ ಪಾತಕಿಗಳಾದ ಜಾವೆದ್ ಚಿಕ್ನ ಮತ್ತು ಝಹೀದ್ ಮಿಯಾನ್ ಅಲಿಯಾಸ್ ಜವೋ ಬಂಧನಕ್ಕೆ ಬಲೆ ಬೀಸಿದ್ದ ಎನ್ ಐಎ, ಈ ಹಿಂದೆ ಇವರ ಬಂಧನಕ್ಕಾಗಿ ಇಂಟರ್  ಪೋಲ್ ನೆರವು ಕೇಳಿತ್ತು. ಇದಕ್ಕಾಗಿ ಇಂಟರ್ ಪೋಲ್ ಸೇರಿದಂತೆ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಯುಎಇ ಮತ್ತು ಅಮೆರಿಕ ಸರ್ಕಾರಗಳಿಗೆ  ಪರಸ್ಪರ ಕಾನೂನು ಸಹಾಯ ಒಡಂಬಡಿಕೆ ಪತ್ರ ಕೂಡಬರೆದಿತ್ತು.

ಇನ್ನು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಎನ್ ಐಎ ಚಾರ್ಜ್ ಶೀಟ್ ನಲ್ಲಿ ನಮೂದಿಸಿರುವ ಡಿ-ಕಂಪನಿಯ10 ಮಂದಿ ಪೈಕಿ 7 ಮಂದಿ ಈಗಗಲೇ ಬಂಧಿತರಾಗಿದ್ದು, ಅವರನ್ನು ಕಳೆದ  ವರ್ಷ ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ಬಂಧಿತರನ್ನು ಹಾಜಿ ಪಟೇಲ್, ಮಹಮದ್ ಯೂನಿಸ್ ಶೇಖ್, ಅಬ್ದುಲ್ ಸಮದ್, ಅಬಿಡ್ ಪಟೇಲ್, ಮಹಮದ್ ಅಲ್ತಾಫ್, ಮಹ್ಸಿನ್ ಖಾನ್  ಮತ್ತು ನಿಸಾರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇವರಲ್ಲದೆ ಮತ್ತೆ ಮೂವರು ಡಿ-ಕಂಪನಿಯ ಸದಸ್ಯರ ಬಂಧನಕ್ಕೂ ಎನ್ ಐಎ ಕಾರ್ಯಾಚರಣೆ ನಡೆಸುತ್ತಿದೆ.

ಈ ಪೈಕಿ ಅಬಿದ್ ಪಟೇಲ್ ಜಾವೆದ್ ಚಿಕ್ನ ನ ಸಹೋದರನಾಗಿದ್ದು, ಮಿಸ್ತ್ರಿ ಮತ್ತು ಬಂಗಾಲಿ ಹತ್ಯೆಗೆ ಈ 50 ಲಕ್ಷ ಸುಪಾರಿ ತೆಗೆದುಕೊಂಡಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ. ಈತನೊಂದಿಗೆ  ಝಹೀದ್ ಮಿಯಾನ್ ನ ಹೆಸರೂ ಕೂಡ ಎನ್ ಐಎ ಚಾರ್ಜ್ ಶೀಟ್ ನಲ್ಲಿ ನಮೂದಿಸಲಾಗಿದ್ದು, ಭೂಗತ ಪಾತಕಿ ದಾವೂದ್ ಹೆಸರು ಪೂರಕ ಚಾರ್ಜ್ ಶೀಟ್ ನಮೂದಿಸಲಾಗಿದೆ ಎಂದು ಪತ್ರಿಕೆ  ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com