ಬಂಧನದಲ್ಲಿರುವ ಆಧ್ಯಾತ್ಮ ಗುರು ಅಸಾರಾಮ್ ಬಾಪು
ಪ್ರಧಾನ ಸುದ್ದಿ
ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಸಾರಾಮ್ ಬಾಪು ಬೆಂಬಲಿಗರು; ಏಳು ಜನರಿಗೆ ಗಾಯ
ರಾತ್ರೋರಾತ್ರಿ ಪೋಲೀಸರ ಮೇಲೆ ಹಲ್ಲೆ ನಡೆಸಿ ಏಳು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರಿಂದ ಆಧ್ಯಾತ್ಮ ಗುರು ಅಸಾರಾಮ್ ಬಾಪು ಅವರ ಬೆಂಬಲಿಗರ ಮೇಲೆ ಗಲಭೆ ಪ್ರಕರಣವನ್ನು ದಾಖಲಿಸಿರುವುದಾಗಿ
ನವದೆಹಲಿ: ರಾತ್ರೋರಾತ್ರಿ ಪೋಲೀಸರ ಮೇಲೆ ಹಲ್ಲೆ ನಡೆಸಿ ಏಳು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರಿಂದ ಆಧ್ಯಾತ್ಮ ಗುರು ಅಸಾರಾಮ್ ಬಾಪು ಅವರ ಬೆಂಬಲಿಗರ ಮೇಲೆ ಗಲಭೆ ಪ್ರಕರಣವನ್ನು ದಾಖಲಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸುಮಾರ್ ೨೦೦೦ ಜನ ಅಸಾರಾಮ್ ಬಾಪು ಬೆಂಗಲಿಗರು, ದೆಹಲಿ ಕೇಂದ್ರ ಭಾಗದಲ್ಲಿರುವ ಸಂಸತ್ ರಸ್ತೆಯ ಪೊಲೀಸ್ ಠಾಣೆಗೆ ಸೋಮವಾರ ರಾತ್ರಿ ಮುತ್ತಿಗೆ ಹಾಕಿ ಬಾಪು ಬಿಡುಗಡೆ ಮಾಡುವಂತೆ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರಿಗೆ ಗಾಯಗಳಾಗಿವೆ ಎಂದಿದ್ದಾರೆ.
ಈ ಪ್ರತಿಭಟನೆಯಲ್ಲಿ ಕೆಲವು ಪೊಲೀಸ್ ವಾಹನಗಳು ಹಾನಿಗೊಂಡಿವೆ. ಆದರೆ ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
೧೬ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ೨೦೧೩ರಿಂದ ಅಸಾರಾಮ್ ಬಾಪು ಅವರನ್ನು ರಾಜಸ್ಥಾನದ ಜೋಧಪುರ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ. ವಿಚಾರಣೆ ಜಾರಿಯಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ