ಬಿಜೆಪಿ ಹೊಸದಾಗಿ ಒಂದು ರಾಜ್ಯ ಗೆದ್ದಿಗೆ, ಕಾಂಗ್ರೆಸ್ ಎರಡು ಕಳೆದುಕೊಂಡಿದೆ: ಜಾವ್ಡೇಕರ್

ಬಿಜೆಪಿ ಹೊಸದಾಗಿ ಒಂದು ರಾಜ್ಯವನ್ನು ಗೆದ್ದಿದ್ದರೆ, ಕಾಂಗ್ರೆಸ್ ಎರಡನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಗುರುವಾರ ವಿವಿಧ ರಾಜ್ಯಗಳ ವಿಧಾನಸಭಾ ಫಲಿತಾಂಶಗಳ
ಬಿಜೆಪಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್
ಬಿಜೆಪಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್
Updated on

ನವದೆಹಲಿ: ಬಿಜೆಪಿ ಹೊಸದಾಗಿ ಒಂದು ರಾಜ್ಯವನ್ನು ಗೆದ್ದಿದ್ದರೆ, ಕಾಂಗ್ರೆಸ್ ಎರಡನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಗುರುವಾರ ವಿವಿಧ ರಾಜ್ಯಗಳ ವಿಧಾನಸಭಾ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಜಾವ್ಡೇಕರ್ "ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಎರಡು ರಾಜ್ಯಗಳನ್ನು ಕಳೆದುಕೊಂಡಿದೆ ಮತ್ತು ಬಿಜೆಪಿ ಒಂದನ್ನು ಗಳಿಸಿದೆ" ಎಂದಿದ್ದಾರೆ.

ರಾಜಕೀಯದಲ್ಲಿ ಯಾವತ್ತಿಗೂ ಜಯ ಗಳಿಸುವುದು ಗುರಿ, ಅದು ಸಾಧ್ಯವಾಗಿದ್ದರೆ ಗೆಳೆಯ ಪಕ್ಷವನ್ನು ಗೆಲ್ಲಿಸಿ ಶತ್ರು ಪಕ್ಷವನ್ನು ಸೋಲಿಸುವುದು ಗುರಿ ಎಂದಿದ್ದಾರೆ.

ಎ ಐ ಡಿ ಎಂ ಕೆ ಮತ್ತು ತೃಣಮೂಲ ಕಾಂಗ್ರೆಸ್ 'ಗೆಳೆಯ ಪಕ್ಷಗಳೇ' ಎಂಬ ಪ್ರಶ್ನೆಗೆ ಅವೆರಡು ಸ್ವತಂತ್ರ ಪಕ್ಷಗಳು ಎಂಬ ಉತ್ತರ ನೀಡಿದ್ದಾರೆ.

"ಶತ್ರುಗಳು ಎಡಪಕ್ಷಗಳು ಮತ್ತು ಕಾಂಗ್ರೆಸ್... ಅವರು ಸೋಲುತ್ತಾರೆ. ಟಿ ಎಂ ಸಿ ಮತ್ತು ಎ ಐ ಡಿ ಎಂ ಕೆ ಸ್ವತಂತ್ರ ಪಕ್ಷಗಳು ಅವರ ಆಯ್ಕೆಯ ಪ್ರಕಾರ ಆ ಪಕ್ಷಗಳು ಒಳ್ಳೆಯ ನಿರ್ಧಾರ ತೆಗೆದುಕೊಂಡಿವೆ" ಎಂದಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಚುನಾವಣಾ ಉಸ್ತುವಾರಿಯನ್ನು ಕೂಡ ವಹಿಸಿದ್ದ ಜಾವ್ಡೇಕರ್ ಇದು ನಿರೀಕ್ಷಿತ ಫಲಿತಾಂಶ ಎಂದಿದ್ದಾರೆ.

"ಮಮತಾ ಮತ್ತು ಜಯಲಲಿತಾ ಅವರ ಗೆಲುವನ್ನು ಜನ ಮೊದಲೇ ಬೀದಿಗಳಲ್ಲಿ ಮಾತನಾಡುತ್ತಿದ್ದರು. ನಾನು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವಾಗ, ಜನರೆಲ್ಲರೂ 'ಅಮ್ಮ', 'ಅಮ್ಮ' ಎನ್ನುತ್ತಿದ್ದರು" ಎಂದು ಕೂಡ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com