ಪ್ರಧಾನಿ ಮೋದಿ -ಟಿಮ್ ಕುಕ್ ಭೇಟಿ: ಮೇಕ್ ಇನ್ ಇಂಡಿಯಾಗೆ ಆಪಲ್ ಸಿಇಒ ಒಲವು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಆಪಲ್ ಸಿಇಒ ಟಿಮ್ ಕುಕ್, ಆಪಲ್ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪ್ರಧಾನಿ ಮೋದಿ -ಟಿಮ್ ಕುಕ್ ಭೇಟಿ
ಪ್ರಧಾನಿ ಮೋದಿ -ಟಿಮ್ ಕುಕ್ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಆಪಲ್ ಸಿಇಒ ಟಿಮ್ ಕುಕ್, ಆಪಲ್ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಭಾರತದಲ್ಲಿನ ಯುವ ಪ್ರತಿಭೆಗಳಿಗೆ ಆಪಲ್ ಮೂಲಕ ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ಆಪಲ್ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸುವುದರ ಮೂಲಕ ಮೇಕ್ ಇನ್ ಇಂಡಿಯಾ ದೊಂದಿಗೆ ಕೈ ಜೋಡಿಸುವುದು ಪ್ರಧಾನಿ ನರೇಂದ್ರ ಮೋದಿ- ಟಿಮ್ ಕುಕ್ ಅವರ ಭೇಟಿ ವೇಳೆ ಚರ್ಚೆಗೆ ಬಂದ ಪ್ರಮುಖ ವಿಷಯಗಳಾಗಿತ್ತು. ಇದರ ಹೊರತಾಗಿ ಸೈಬರ್ ಭದ್ರತೆ ಹಾಗೂ ಡೇಟಾ ಎನ್ಕ್ರಿಪ್ಷನ್ (ಗೂಢ ಲಿಪಿಕಾರಣ)ದ ಬಗ್ಗೆಯೂ ಟಿಮ್ ಕುಕ್ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದಾರೆ.    
ಭಾರತಕ್ಕಾಗಿ ಆಪಲ್ ಸಂಸ್ಥೆ ಹೊಂದಿರುವ ಭವಿಷ್ಯದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಂಡಿರುವ ಟಿಮ್ ಕುಕ್, ಭಾರತದ ಉದ್ದಗಲಕ್ಕೂ ಇರುವ ಪ್ರತಿಭೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಪಲ್ ಗೆ ಸೂಕ್ತವಾದ ಕೌಶಲ್ಯ ಹೊಂದಿರುವ ಪ್ರತಿಭೆಗಳು ಇಲ್ಲಿವೆ ಎಂದು ಹೇಳಿದ್ದಾರೆ. ಆಪಲ್ ಸಂಸ್ಥೆ ಸಿಇಒ ಈಗಾಗಲೇ ಬೆಂಗಳೂರಿನಲ್ಲಿ ಆಪಲ್ ಡಿಸೈನ್ ಕೇಂದ್ರ ಹಾಗೂ ಮ್ಯಾಪ್ ಗಾಗಿ ಹೈದರಾಬಾದ್ ನಲ್ಲಿ ಒಂದು ಕೇಂದ್ರವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರ ಅಪ್ ಡೇಟೆಡ್ ಆಪ್ ನ್ನು ಬಿಡುಗಡೆ ಮಾಡಿರುವ ಟಿಮ್ ಕುಕ್, ಭಾರತದಲ್ಲಿ ಆಪ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳಿದ್ದಾರೆ. ಇದೇ ವೇಳೆ ಸಿದ್ಧಿ ವಿನಾಯಕ ದೇವಾಲಯ ಭೇಟಿ ಹಾಗೂ ಖಾನ್ ಪುರದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ಅನುಭವಗಳನ್ನು ಟಿಮ್ ಕುಕ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಂಡಿದ್ದು, ಉದ್ಯಮ ಪ್ರಾರಂಭಿಸುವ, ನಡೆಸುವ ಪ್ರಕ್ರಿಯೆಗಳನ್ನು ಸುಲಭಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com