ಚಿತ್ರದುರ್ಗ ಜಿಪಂ ಅಧಿಕಾರಿಯಿಂದ ತನ್ನ 3 ಹಿರಿಯ ಅಧಿಕಾರಿಗಳ ಹತ್ಯೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ!

ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧಿಕಾರಿಯೊಬ್ಬರು ತಮ್ಮ ಮೂವರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡುವುದಕ್ಕೆ ಅನುಮತಿ ಕೋರಿ ರಾಜ್ಯಪಾಲರ...
ರಾಜ್ಯಪಾಲ ವಜುಭಾಯಿ ವಾಲಾ
ರಾಜ್ಯಪಾಲ ವಜುಭಾಯಿ ವಾಲಾ
ಬೆಂಗಳೂರು: ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧಿಕಾರಿಯೊಬ್ಬರು ತಮ್ಮ ಮೂವರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡುವುದಕ್ಕೆ ಅನುಮತಿ ಕೋರಿ ರಾಜ್ಯಪಾಲರ ವಜುಭಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.
ಕರ್ತವ್ಯಕ್ಕೆ ಗೈರು ಆದ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಅಮಾನತುಗೊಂಡಿರುವ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧಿಕಾರಿ ಎಂ.ಎಸ್, ಮೋಕ್ಷಕುಮಾರ್ ಅವರು, ತಮ್ಮ ಅಮಾನತು ತೆರವುಗೊಳಿಸದಿರುವುದರಿಂದ ತೀವ್ರ ಬೇಸರಗೊಂಡು ಹಿರಿಯ ಅಧಿಕಾರಿಗಳ ಹತ್ಯೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಿ.ಡಿ.ಕೋಟೆ ಕಾರ್ಯದರ್ಶಿಯಾಗಿದ್ದ ಮೋಕ್ಷಕುಮಾರ್ ಅವರನ್ನು 8 ತಿಂಗಳ ಕಾಲ ಸತತ ಕೆಲಸಕ್ಕೆ ಗೈರು ಆಗಿದ್ದ ಆರೋಪದ ಮೇಲೆ 2015, ಫೆಬ್ರವರಿ 20ರಂದು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ನಂತರ ಅಮಾನತು ತೆರವುಗೊಳಿಸುವಂತೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ಇದಕ್ಕೆ ಸ್ಪಂದಿಸಿದ ಸಿಎಂ ಹಾಗೂ ರಾಜ್ಯಪಾಲರು ಅಮಾನತು ತೆರವುಗೊಳಿಸುವಂತೆ ಆದೇಶಿಸಿದ್ದರು. ಆದರೆ ತನ್ನ ಹಿರಿಯ ಅಧಿಕಾರಿಗಳು ಒಂದು ವರ್ಷವಾದರೂ ಅಮಾನತು ತೆರವುಗೊಳಿಸಿಲ್ಲ ಎಂದು ಮೋಕ್ಷಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಹಾಗೂ ರಾಜ್ಯಪಾಲರ ಪತ್ರಕ್ಕೂ ಮಾನ್ಯತೆ ನೀಡದ ತನ್ನ ಹಿರಿಯ ಅಧಿಕಾರಿಗಳಾದ ಚಂದ್ರಶೇಖರ್, ಶ್ರೀಧರ್ ಹಾಗೂ ಸುನಿಲ್ ಎಂಬುವವರ ಕೊಲೆಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ಮೋಕ್ಷಕುಮಾರ್ ಅವರು ತಿಳಿಸಿದ್ದಾರೆ.
ಅಮಾನತು ತೆರವಿಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಮತ್ತು ಸಂಬಂಳ ಸಹ ನೀಡಿಲ್ಲ. ಹೀಗಾಗಿ ತಾನು ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ಅಧಿಕಾರಿಳ ಕೊಲೆಗೆ ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com