ನೋಟು ನಿಷೇಧ ಎಫೆಕ್ಟ್: 1.5 ಲಕ್ಷ ಕೋಟಿಗೇರಿದ ಬ್ಯಾಂಕ್ ಠೇವಣಿ ಮೊತ್ತ!

500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಬ್ಯಾಂಕುಗಳಿಗೆ ಹರಿದುಬರುತ್ತಿರುವ ಠೇವಣಿಗಳ ಮೊತ್ತ ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ವಿವಿಧ ಬ್ಯಾಂಕುಗಳ ಠೇವಣಿ ಮೊತ್ತ ಬರೊಬ್ಬರಿ 1.5ಲಕ್ಷ ಕೋಟಿಗೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಬ್ಯಾಂಕುಗಳಿಗೆ ಹರಿದುಬರುತ್ತಿರುವ ಠೇವಣಿಗಳ ಮೊತ್ತ ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ವಿವಿಧ ಬ್ಯಾಂಕುಗಳ  ಠೇವಣಿ ಮೊತ್ತ ಬರೊಬ್ಬರಿ 1.5ಲಕ್ಷ ಕೋಟಿಗೆ ಏರಿಕೆಯಾಗಿದೆ.

ವೀಕೆಂಡ್ ರಜಾ ದಿನವನ್ನೂ ಮರೆತ ಜನತೆ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲು ಮುಗಿಬಿದ್ದಿದ್ದು, ಈ ರೀತಿ ಠೇವಣಿಯಾದ ಮೊತ್ತ ಭಾನುವಾರ ಸಂಜೆ ವೇಳೆಗೆ ಬರೊಬ್ಬರಿ 1.5 ಲಕ್ಷ ಕೋಟಿ  ಗಡಿಯನ್ನು ದಾಟಿದೆ ಎಂದು ಹೇಳಲಾಗುತ್ತಿದೆ. ದೇಶದ ಪ್ರಮುಖ ಬ್ಯಾಂಕ್ ಎಸ್ ಬಿಐ ವೊಂದರಲ್ಲೇ ಠೇವಣಿ ಮೊತ್ತ ಬರೊಬ್ಬರಿ 75 ಸಾವಿರ ಕೋಟಿಗೇರಿದ್ದು, ಉಳಿದಂತೆ ವಿವಿಧ ಬ್ಯಾಂಕುಗಳಲ್ಲಿ 75 ಸಾವಿರ ಕೋಟಿ ಠೇವಣಿ  ಹರಿದುಬಂದಿದೆ.

ಇನ್ನು ಹಳೆಯ ನೋಟುಗಳಿಗೆ ಹೊಸ ನೋಟುಗಳನ್ನು ಬದಲಾವಣೆ ಪ್ರಕ್ರಿಯೆಯಲ್ಲಿ ಸುಮಾರು 3,753 ಕೋಟಿ ರು. ಹಳೆಯ ನೋಟುಗಳು ಬ್ಯಾಂಕುಗಳಿಗೆ ಆಗಮಿದೆ. ಅಂತೆಯೇ ಎಟಿಎಂ ಮತ್ತು ಬ್ಯಾಂಕುಗಳಲ್ಲಿನ ವಿತ್ ಡ್ರಾ ಪ್ರಕ್ರಿಯೆ  ಮೂಲಕ 7,705 ಕೋಟಿ ಹಣದ ವ್ಯವಹಾರ ನಡೆದಿದೆ. ಈ ಪೈಕಿ 100 ರು ಮತ್ತು ಹೊಸ 2000 ರು.ಮುಖಬೆಲೆಯ ನೋಟುಗಳು ಸೇರಿವೆ ಎಂದು ತಿಳಿದುಬಂದಿದೆ. ಇನ್ನು ಶನಿವಾರ ಸ್ಥಗಿತವಾಗಿದ್ದ ಎಟಿಎಂಗಳು ಭಾನುವಾರ  ಆರಂಭವಾದ್ದರಿಂದ ಬ್ಯಾಂಕುಗಳ ಮುಂಭಾಗದಲ್ಲಿದ್ದ ಜನಸಂದಣಿ ಎಟಿಎಂ ಕೇಂದ್ರಗಳತ್ತ ವಿಭಜನೆಯಾಗಿತ್ತು. ಕೆಲ ಎಟಿಎಂಗಳಲ್ಲಿ 100 ಮತ್ತು 50 ರು.ಗಳನ್ನು ನಿಯಮಿತವಾಗಿ ವಿತರಣೆ ಮಾಡಲು ಆರಂಭಿಸಲಾಗಿದೆ.

ಇನ್ನು ಇಂದು ಗುರುನಾನಕ್ ಜಯಂತಿ ಹೊರತಾಗಿಯೂ ಆರ್ಥಿಕ ಬಿಕ್ಕಟ್ಟು ಹಿನ್ನಲೆಯಲ್ಲಿ ಬ್ಯಾಂಕುಗಳ ಮತ್ತು ಅಂಚೆಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇಂದೂ ಸಹ ಬ್ಯಾಂಕು ಹಾಗೂ ಅಂಚೇ ಕಚೇರಿಗಳ ಮುಂದೆ ಜನಸಂದಣಿ  ಮುಂದುವರೆದಿದೆ. ಕೇಂದ್ರ ಸರ್ಕಾರದ ನಿರ್ದೇಶದನ ಮೇರೆಗೆ ಇಂದಿನಿಂದ ಸರತಿ ಸಾಲಲ್ಲಿ ಬದಲಾವಣೆ ಮಾಡಲಾಗಿದ್ದು, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಸಾಲು ಮಾಡಿಸುವಂತೆ ಬ್ಯಾಂಕುಗಳ ಭದ್ರತಾ  ಸಿಬ್ಬಂದಿಗಳಿದೆ ಸೂಚನೆ ನೀಡಲಾಗಿದೆ. ಅಂತೆಯೇ ಠೇವಣಿ ಇಡುವ ಗ್ರಾಹಕರು, ವಿತ್ ಡ್ರಾ ಮಾಡುವ ಮತ್ತು ಹಣ ಬದಲಾವಣೆಗೆ ಬರುವ ಮಂದಿಗಾಗಿ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯುವಂತೆಯೂ ಸರ್ಕಾರ ಬ್ಯಾಂಕ್ ಸಿಬ್ಬಂದಿಗೆ  ಸೂಚನೆ ನೀಡಿದೆ.

ಖಾಸಗಿ ಬ್ಯಾಂಕ್ ಎಟಿಎಂಗಳಲ್ಲಿ ಹೊಸ ನೋಟುಗಳು!

ಇನ್ನು ಕೆಲ ಖಾಸಗಿ ಬ್ಯಾಂಕುಗಳು ತಮ್ಮ ತಮ್ಮ ಎಟಿಎಂಗಳಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಹೊಸ 2000ರು ಮುಖಬೆಲೆಯ ನೋಟುಗಳು ಎಟಿಎಂಗಳಲ್ಲಿ ಲಭ್ಯವಾಗುವಂತೆ ಮಾಡಿವೆ. ಪ್ರಮುಖವಾಗಿ  ಆಕ್ಸಿಸ್ ಬ್ಯಾಂಕ್, ಐಸಿಸಿಐ ಬ್ಯಾಂಕ್, ಹೆಚ್ ಡಿಎಫ್ ಸಿ ಹಾಗೂ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ನ ಕೆಲ ಎಟಿಎಂಗಳಲ್ಲಿ ನಿನ್ನೆಯಿಂದಲೇ ಹೊಸ 2000 ರು.ನೋಟುಗಳು ಲಭ್ಯವಿದೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com