ಜನ್ ಧನ್ ಖಾತೆಯ ಮೇಲೂ ನಿಯಂತ್ರಣ ಹೇರಿದ ಆರ್ ಬಿಐ, ವಿತ್ ಡ್ರಾ ಮಿತಿ 10 ಸಾವಿರ ರು.ಗೆ ಕಡಿತ

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜನ್ ಧನ್ ಖಾತೆಗಳಲ್ಲಿನ ವಿತ್ ಡ್ರಾ ಮಿತಿಯನ್ನು 10 ಸಾವಿರ ರು. ಕಡಿತಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜನ್ ಧನ್ ಖಾತೆಗಳಲ್ಲಿನ ವಿತ್ ಡ್ರಾ ಮಿತಿಯನ್ನು 10 ಸಾವಿರ ರು. ಕಡಿತಗೊಳಿಸಿದೆ.

ನೋಟು ನಿಷೇಧದ ಬಳಿಕ ಜನ್ ಧನ್ ಖಾತೆಗಳಲ್ಲಿ ಅಪಾರ ಪ್ರಮಾಣದ ಠೇವಣಿ ಹರಿದುಬರುತ್ತಿದ್ದು, ಈ ಪೈಕಿ ಬಹುತೇಕ ಹಣ ಕಪ್ಪುಹಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಆರ್ ಬಿಐ  ಜನ್ ಧನ್ ಖಾತೆಗಳಲ್ಲಿನ ಹಣ ಹಿಂಪಡೆಯುವ ಮಿತಿಗೆ ಕಡಿವಾಣ ಹಾಕಿದ್ದು, ಈ ಖಾತೆಗಳಲ್ಲಿ ತಿಂಗಳಿಗೆ ಗರಿಷ್ಠ 10 ಸಾವಿರ ರು. ನಗದು ಹಣವನ್ನು ಮಾತ್ರ ಹಿಂಪಡೆಯಬಹುದಾಗಿದೆ.

ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್ ಬಿಐ ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಆಗಿರುವ ಜನ್ ಧನ್ ಯೋಜನೆಯ ಖಾತೆದಾರರು ಮಾಸಿಕ ಗರಿಷ್ಢ 10 ಸಾವಿರ ರು, ಹಣ ಹಿಂಪಡೆಯಬಹುದಾಗಿದ್ದು, ಕೆವೈಸಿ  ಆಗಿರದ ಖಾತೆಗಳಲ್ಲಿ ತಿಂಗಳಿಗೆ ಗರಿಷ್ಠ 5 ಸಾವಿರ ರು.ಹಣವನ್ನು ಮಾತ್ರ ವಿತ್ ಡ್ರಾ ಮಾಡಬಹುದಾಗಿದೆ ಎಂದು ತಿಳಿಸಿದೆ. ಪ್ರಮುಖವಾಗಿ ನೋಟು ನಿಷೇಧ ಘೋಷಣೆಯಾದ ನವೆಂಬರ್ 8 ರ.ಬಳಿಕ ಖಾತೆಗಳಿಗೆ ಜಮೆಯಾದ ಹಣಕ್ಕೆ  ಮಾತ್ರ ಈ ನಿಯಮಾವಳಿ ಅನ್ವಯವಾಗುತ್ತದೆ ಎಂದೂ ಆರ್ ಬಿಐ ಸ್ಪಷ್ಟಪಡಿಸಿದೆ.

ಜನ್ ಧನ್ ಖಾತೆಯನ್ನು ಹೊಂದಿರುವ ರೈತರು, ಬಡವರು ಮತ್ತು ಸಣ್ಣ ಪ್ರಮಾಣದ ವ್ಯಾಪಾರಸ್ಥರು ಕಾಳಧಿನಕರ ಕಮಿಷನ್ ದಂಧೆಗೆ ಬಲಿಯಾಗದಂತೆ ತಡೆಯಲು ಆರ್ ಬಿಐ ಈ ಮಹತ್ವದ ಕ್ರಮ ಕೈಗೊಂಡಿದೆ ಎಂದು  ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com