ಬಾಂಗ್ಲಾದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿ

ಬಾಂಗ್ಲಾದೇಶದ ಗಾಜಿಪುರ ನಗರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಶನಿವಾರ ಹತ್ಯೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಢಾಕಾ: ಬಾಂಗ್ಲಾದೇಶದ ಗಾಜಿಪುರ ನಗರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಶನಿವಾರ ಹತ್ಯೆ ಮಾಡಲಾಗಿದೆ. 
ಇಬ್ಬರು ಹತ್ಯೆಯಾಗಿರುವುದನ್ನು ಧೃಢೀಕರಿಸಿರುವ ರ್ಯಾಪಿಡ್ ಆಕ್ಷನ್ ಬೆಟಾಲಿಯನ್ (ಆರ್ ಎ ಬಿ) ವಕ್ತಾರ ಮುಫ್ತಿ ಮಹಮೂದ್ ಖಾನ್, ಅವರ ಗುರುತುಗಳನ್ನು ಬಹಿರಂಗಪಡಿಸಿಲ್ಲ. 
ಗಾಜಿಪುರ ಜಿಲ್ಲೆಯ ಪಶ್ಚಿಮ ಹರಿನಾಲ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಭಯೋತ್ಪಾದನಾ ವಿರೋಧಿ ದಾಳಿಯಲ್ಲಿ ಭದ್ರತಾ ಪಡೆ ಮನೆಯೊಂದನ್ನು ಸುತ್ತುವರೆದು ಈ ಕಾರ್ಯಾಚರಣೆ ನಡೆಸಿದೆ. ಎಕೆ-47 ಬಂಧೂಕು, ಬಾಂಬ್ ತಯಾರಿಸುವ ವಸ್ತುಗಳು, ಲ್ಯಾಪ್ ಟಾಪ್ ಮತ್ತು ಬುಲೆಟ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಹಿರಿಯ ಅಧಿಕಾರಿ ಹೇಳಿದ್ದಾರೆ ಎಂದು ಢಾಕಾ ಟ್ರಿಬ್ಯುನ್ ವರದಿ ಮಾಡಿದೆ. 
ಒಂದು ತಿಂಗಳ ಹಿಂದೆಯಷ್ಟೇ ಕಟ್ಟಿದ್ದ ಈ ಕಟ್ಟಡವನ್ನು ಭಯೋತ್ಪಾದಕರು ಬಾಡಿಗೆಗೆ ಪಡೆದಿದ್ದರು ಎಂದು ಪ್ರಾದೇಶಿಕ ನಿವಾಸಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com