ಫ್ಲಾಟ್ ಕೊಂಡವರಿಗೆ ಹಣ ಹಿಂದಿರುಗಿಸಿ: ಯುನಿಟೆಕ್ ಗೆ ಸುಪ್ರೀಂ ಕೋರ್ಟ್ ಸೂಚನೆ

ಏಳು ವರ್ಷಗಳ ಹಿಂದೆ ಗುರಗಾಂವ್ ನಲ್ಲಿ ಅಪಾರ್ಟ್ಮೆಂಟ್ ಫ್ಲಾಟ್ ಗಳಿಗಾಗಿ ಮುಂಗಡ ನೀಡಿ, ಫ್ಲಾಟ್ ಇನ್ನು ವಶಕ್ಕೆ ಸಿಗದ 39 ಜನಕ್ಕೆ ಹಣ ಹಿಂದಿರುಗಿಸುವಂತೆ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆ ಯುನಿಟೆಕ್ ಗೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಏಳು ವರ್ಷಗಳ ಹಿಂದೆ ಗುರಗಾಂವ್ ನಲ್ಲಿ ಅಪಾರ್ಟ್ಮೆಂಟ್ ಫ್ಲಾಟ್ ಗಳಿಗಾಗಿ ಮುಂಗಡ ನೀಡಿ, ಫ್ಲಾಟ್ ಇನ್ನು ವಶಕ್ಕೆ ಸಿಗದ 39 ಜನಕ್ಕೆ ಹಣ ಹಿಂದಿರುಗಿಸುವಂತೆ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆ ಯುನಿಟೆಕ್ ಗೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ. 
ಮೂಲಧನವನ್ನು ಹಿಂದಿರುಗಿಸಲು, ನ್ಯಾಯಾಧೀಶ ದೀಪಕ್ ಮಿಶ್ರ, ನ್ಯಾಯಾಧೀಶ ಅಮಿತಾವ ರಾಯ್ ಮತ್ತು ನ್ಯಾಯಾಧೀಶ ಎ ಎಂ ಖಾಂವಿಲ್ಕರ್ ಒಳಗೊಂಡ ನ್ಯಾಯಪೀಠ ಆದೇಶಿಸಿದ್ದು ಅದರ ಬಡ್ಡಿ, ಹಾಗು ಫ್ಲಾಟ್ ವಶಕ್ಕೆ ನೀಡಲು ವಿಫಲವಾಗಿರುವುದಕ್ಕೆ ಪರಿಹಾರವನ್ನು ಮುಂದಿನ ವಿಚಾರಣೆಯಲ್ಲಿ ತೀರ್ಮಾನಿಸಲಾಗುವುದು ಎಂದಿದೆ. ಮುಂದಿನ ವಿಚಾರಣೆ ಮುಂದಿನ ವರ್ಷ ಜನವರಿ ಎರಡನೇ ವಾರ ನಡೆಯಲಿದೆ. 
ರೋಮ್ ಒಂದೇ ದಿನದಲ್ಲಿ ಕಟ್ಟಲಾಗಲಿಲ್ಲ ಆದರೆ ಕೊಳ್ಳುವವನಿಗೆ ಮಾರಾಟ ಮಾಡುವವನು ನಂಬಿಕೆ ಮೂಡಿಸಿ, ಉಳಿಸಿಕೊಳ್ಳುವುದು ಯಾವುದೇ ಆರ್ಥಿಕ ವ್ಯವಸ್ಥೆಯ ತಳಹದಿ ಎಂದು ಈ ಆದೇಶ ನೀಡುವಾಗ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ. 
ಪೂರ್ಣ ಹಣ ನೀಡಿದ್ದರು, ಇಷ್ಟು ವರ್ಷ ಕಳೆದಿದ್ದರು ತಮ್ಮ ತಲೆಯ ಮೇಲೆ ಸ್ವಂತದ ಸೂರಿಲ್ಲದೆ, ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಸಂತ್ರಸ್ತರ ನೋವನ್ನು ಗಮನಿಸಿರುವುದಾಗಿ ಕೋರ್ಟ್ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com