
ಇಸ್ಲಾಮಾಬಾದ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಕ್ವೆಟ್ಟಾ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ಖಾತೆ ಸೇರಿದಂತೆ ಒಟ್ಟು 5, 100 ಶಂಕಿತ ಉಗ್ರರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ರಾಷ್ಟ್ರೀಯ ಭದ್ರತಾ ಕಾರಣಗಳನ್ನು ಒಡ್ಡಿ ಪಾಕಿಸ್ತಾನ ಸರ್ಕಾರ ಈ ಶಂಕಿತ ಉಗ್ರರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಸುಮಾರು 5.100 ಶಂಕಿತ ಉಗ್ರರ ಖಾತೆಯನ್ನು ಜಪ್ತಿ ಮಾಡಿದೆ. ಈ 5, 100 ಖಾತೆಗಳ ಪೈಕಿ ಪಠಾಣ್ ದಾಳಿ ರೂವಾರಿ ಜೈಶ್ ಇ ಮಹಮದ್ ಸಂಘಟನೆಯ ಅಜರ್ ಮಸೂದ್ ಹಾಗೂ ಅಲ್ಲಾಹ್ ಬಕ್ಸ್ ಮುಖಂಡನ ಪುತ್ರನ ಖಾತೆಗಳು ಸೇರಿವೆ ಎಂದು ಹೇಳಲಾಗುತ್ತಿದೆ.
ಆಂತರಿಕ ಸಚಿವಾಲಯದ ಮನವಿಯ ಮೇರೆಗೆ ಪಾಕಿಸ್ತಾನ ಸರ್ಕಾರ ಈ ಕಠಿಣ ನಿಲುವು ತಳೆದು5, 100 ಶಂಕಿತ ಉಗ್ರರ ಸುಮಾರು 400ಮಿಲಿಯನ್ ಮೌಲ್ಯದ ಹಣವನ್ನು ಸರ್ಕಾರ ವಶಕ್ಕೆ ಪಡೆಯಲು ಮುಂದಾಗಿದೆ.
ಎಲ್ಲ ಶಂಕಿತ 5, 100 ಉಗ್ರರ ಖಾತೆಗಳನ್ನು ವೀಕ್ಷಣೆಯಲ್ಲಿಟ್ಟಿದ್ದ ಎಸ್ ಬಿಪಿ
ಇದೇ ವೇಳೆ ಪ್ರಸ್ತುತ ಪಾಕಿಸ್ತಾನ ಸರ್ಕಾರ ವಶಕ್ಕೆ ಪಡೆದಿರುವ ಎಲ್ಲ 5100 ಖಾತೆಗಳನ್ನು ಜಪ್ತಿಗೂ ಮುನ್ನ ಸುಮಾರು ತಿಂಗಳ ಕಾಲ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಬ್ಯಾಂಕ್ ವೀಕ್ಷಣೆಯಲ್ಲಿಟ್ಟಿತ್ತು ಎಂದು ತಿಳಿದುಬಂದಿದೆ. ಖಾತೆಯಲ್ಲಿನ ಶಂಕಾಸ್ಪದ ವಿನಿಮಯ ವಾಣಿಜ್ಯ ವವ್ಯಹಾರಗಳ ಆಧಾರದ ಮೇಲೆ ಈ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 1997ರ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿಯಲ್ಲಿ ಈ ಖಾತೆಗಳನ್ನು ಮುಟ್ಟುಗೋಳು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಎ ಕೆಟಗರಿ (ಹೆಚ್ಚು ಅಪಾಯ)ಯಡಿಯಲ್ಲಿ ಬರುವ 1200 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಈ 1200 ಖಾತೆಗಳ ಅಡಿಯಲ್ಲೇ ಜೈಶ್ ಇ ಮಹಮದ್ ಮುಖ್ಯಸ್ಥ ಮಸೂದ್ ಅಜರ್ ಹಾಗೂ ಅಲ್ಲಾಹ್ ಬಕ್ಸ್ ಪುತ್ರನ ಖಾತೆಯನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
Advertisement