ಭರವಸೆ ಈಡೇರಿಸಿದ ಮಮತಾ; ಸಿಂಗೂರು ರೈತರಿಗೆ ಜಮೀನು ವಾಪಸ್

ಹಲವು ವರ್ಷಗಳ ಹಿಂದ ತಾವು ನೀಡಿದ ವಚನವನ್ನು ಈಡೇರಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಂಗೂರಿನ ರೈತರಿಗೆ 9,117 ಜಮೀನು ದಾಖಲೆಗಳನ್ನು ಹಿಂದಿರುಗಿಸಿದ್ದು,
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Updated on
ಸಿಂಗೂರು: ಹಲವು ವರ್ಷಗಳ ಹಿಂದ ತಾವು ನೀಡಿದ ವಚನವನ್ನು ಈಡೇರಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಂಗೂರಿನ ರೈತರಿಗೆ 9,117 ಜಮೀನು ದಾಖಲೆಗಳನ್ನು ಹಿಂದಿರುಗಿಸಿದ್ದು, 800 ಕೂಲಿ ಕಾರ್ಮಿಕರಿಗೆ ಪರಿಹಾರ ನೀಡಿದ್ದಾರೆ. ಟಾಟಾ ಮೋಟಾರ್ಸ್ ಸಂಸ್ಥೆಯ ನ್ಯಾನೋ ಯೋಜನೆಗಾಗಿ ಇವರ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 
ರಾಜ್ಯ ಮತ್ತು ಮುಖ್ಯಮಂತ್ರಿಗಳಿಗೆ ಜೈಕಾರ ಘೋಷಣೆಯ ನಡುವೆ ರೈತರ ಕುಟುಂಬಗಳಿಗೆ ವೈಯಕ್ತಿಕವಾಗಿ ಮಮತಾ ದಾಖಲೆಗಳನ್ನು ಹಿಂದಿರುಗಿಸಿದ್ದಾರೆ. ಸನಾಪಾರದ ಸಿಂಗೂರ್ ದಿವಸ್ ಪ್ರದೇಶದಲ್ಲಿ ಈ ಪ್ರಕ್ರಿಯೆ ನಡೆದಿದೆ. 
ದುರ್ಗಾಪುರ ಎಕ್ಸ್ಪ್ರೆಸ್ ವೇ ನ ಈ ಜಾಗದಲ್ಲಿ 2008 ರಲ್ಲಿ ಮಮತಾ ಬ್ಯಾನರ್ಜಿ ರೈತರ ಜಮೀನು ಹಿಂದಿರುಗಿಸುವಂತೆ ಆಗ್ರಹಿಸಿ 16 ದಿನಗಳ ಧರಣಿ ಕುಳಿತಿದ್ದರು. 997.11 ಎಕರೆ ಜಾಗದಲ್ಲಿ ಸುಮಾರು 400 ಎಕರೆ ಜಮೀನನ್ನು ಒತ್ತಾಯಪೂರ್ವಕವಾಗಿ ಎಡಪಕ್ಷಗಳ ಸರ್ಕಾರ ವಶಪಡಿಸಿಕೊಂಡಿತ್ತು. 
ಈ ಸಮಯದಲ್ಲಿ ನರ್ಮದಾ ಬಚಾವೋ ಆಂದೋಲನದ ಸದಸ್ಯೆ ಮೇಧಾ ಪಾಟ್ಕರ್ ಸೇರಿದಂತೆ ಹಲವು ಬುದ್ಧಿಜೀವಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 
ಕೆಲವು ದಿನಗಳ ಹಿಂದೆಯಷ್ಟೇ ಜಮೀನು ವಶಪಡಿಸಿಕೊಂಡಿರುವುದು ಕಾನೂನು ಬಾಹಿರ ಎಂದಿದ್ದ ಸುಪ್ರೀಂ ಕೋರ್ಟ್ ಜಮೀನು ಹಿಂದಿರುಗಿಸಲು ಆದೇಶಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com