ಭಾರತಕ್ಕೆ ನುಸುಳಿರುವ ಆತ್ಮಹತ್ಯಾ ದಾಳಿಕೋರರ ಮೂರು ತಂಡ: ಗುಪ್ತಚರ ಇಲಾಖೆ ಮಾಹಿತಿ

17 ಮಂದಿ ಸೈನಿಕರ ಸಾವಿಗೆ ಕಾರಣವಾದ ಉರಿ ಉಗ್ರದಾಳಿ ಪ್ರಕರಣ ಸಂಬಂಧ ಕೇಂದ್ರ ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ ನೀಡಿದ್ದು, ಪಾಕ್ ಆಕ್ರಮಿತ ಪಾಕಿಸ್ತಾನದಿಂದ ಆತ್ಮಹತ್ಯಾ ದಾಳಿಕೋರರ ಮೂರು ತಂಡ ಕಾಶ್ಮೀರ ಪ್ರವೇಶಿಸಿದೆ ಎಂದು ಹೇಳಿದೆ.
ಉರಿ ಸೆಕ್ಟರ್ ನಲ್ಲಿ ಉಗ್ರ ದಾಳಿ (ಸಂಗ್ರಹ ಚಿತ್ರ)
ಉರಿ ಸೆಕ್ಟರ್ ನಲ್ಲಿ ಉಗ್ರ ದಾಳಿ (ಸಂಗ್ರಹ ಚಿತ್ರ)

ನವದೆಹಲಿ: 17 ಮಂದಿ ಸೈನಿಕರ ಸಾವಿಗೆ ಕಾರಣವಾದ ಉರಿ ಉಗ್ರದಾಳಿ ಪ್ರಕರಣ ಸಂಬಂಧ ಕೇಂದ್ರ ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ ನೀಡಿದ್ದು, ಪಾಕ್ ಆಕ್ರಮಿತ ಪಾಕಿಸ್ತಾನದಿಂದ  ಆತ್ಮಹತ್ಯಾ ದಾಳಿಕೋರರ ಮೂರು ತಂಡ ಕಾಶ್ಮೀರ ಪ್ರವೇಶಿಸಿದೆ ಎಂದು ಹೇಳಿದೆ.

ಉರಿ ಸೆಕ್ಟರ್ ನಲ್ಲಿ ಇಂದು ಮುಂಜಾನೆ ನಡೆದ ಭೀಕರ ಉಗ್ರ ದಾಳಿಯಲ್ಲಿ 17 ಮಂದಿ ಸೈನಿಕರು ಸಾವನ್ನಪ್ಪಿದ್ದು, ನಾಲ್ವರು ಉಗ್ರರನ್ನು ಸದೆಬಡಿಯುವಲ್ಲಿ ಸೈನಿಕರು ಯಶಸ್ವಿಯಾಗಿದ್ದಾರೆ. ಅಲ್ಲದೆ  ಘಟನಾ ಸ್ಥಳದಲ್ಲಿ ಅವಿತಿರುವ ಉಗ್ರರಿಗಾಗಿ ಸೈನಿಕರು ಶೋಧ ನಡೆಸುತ್ತಿರುವಂತೆಯೇ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತೊಂದು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಪ್ರಸ್ತುತ  ಕಾಶ್ಮೀರಕ್ಕೆ ಆತ್ಮಹತ್ಯಾ ದಾಳಿಕೋರರ ಬಹು ದೊಡ್ಡ ತಂಡವೇ ಆಗಮಸಿದ್ದು, ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದೆ ಎಂದು ಹೇಳಿದೆ.

ಗುಪ್ತಚರ ಇಲಾಖೆ ಅಧಿಕಾರಿಗಳ ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಆತ್ಮಹತ್ಯಾ ದಾಳಿಕೋರರ ಮೂರು ತಂಡ ಆಗಮಿಸಿದ್ದು, ಒಂದು ತಂಡ ಉರಿ ಸೆಕ್ಟರ್ ನಲ್ಲಿರುವ ಸೈನಿಕರ ಮೇಲೆ ದಾಳಿ  ನಡೆಸಿದೆ. ಇನ್ನು ಇನ್ನುಳಿದಿರುವ ಎರಡು ತಂಡಗಳ ಪೈಕಿ ಒಂದು ತಂಡ ಪೂಂಛ್ ಸೆಕ್ಟರ್ ನಲ್ಲಿ ಭಾರತೀಯ ಯೋಧರತ್ತ ಗುಂಡಿನ ಚಕಮಕಿಯಲ್ಲಿ ತೊಡಗಿದ್ದು, ಉಗ್ರರಿಗೆ ಭಾರತೀಯ ಯೋಧರು  ದಿಟ್ಟ ಉತ್ತರ ನೀಡುತ್ತಿದ್ದಾರೆ. ಇನ್ನುಳಿದ ಮತ್ತೊಂದು ತಂಡ ಶ್ರೀನಗರದ ಹೆದ್ದಾರಿಯಲ್ಲಿ ಅವಿತಿರುವ ಶಂಕೆ ಇದ್ದು, ಈ ತಂಡಕ್ಕಾಗಿ ಹೆದ್ದಾರಿಯಾದ್ಯಂತ ಯೋಧರು ವ್ಯಾಪಕ ಶೋಧ  ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಉರಿ ಸೆಕ್ಟರ್ ನಲ್ಲಿ ನಡೆದ ದಾಳಿಯಲ್ಲಿ ಒಟ್ಟು 17 ಯೋಧರು ಹುತಾತ್ಮರಾಗಿ 4 ಉಗ್ರರು ಸಾವಿಗೀಡಾಗಿದ್ದರು. ಕಳೆದೊಂದು ದಶಕದಲ್ಲಿಯೇ ಭಾರತದ ಮೇಲೆ ಉಗ್ರರು ನಡೆಸಿರುವ  ದಾಳಿ ಪೈಕಿ ಪ್ರಸ್ತುತ ದಾಳಿ ಅತೀ ದೊಡ್ಡ ಪ್ರಮಾಣದ ದಾಳಿಯಾಗಿದೆ ಎಂದು ತಜ್ಞರು ಬಣ್ಣಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com