ಯೋಧರ ಬಲಿದಾನ ವ್ಯರ್ಥವಾಗದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ; ಯೋಧರಿಗೆ ರಕ್ಷಣಾ ಸಚಿವರ ಸೂಚನೆ

ಉರಿ ಸೇನಾ ಕ್ಯಾಂಪ್ ಮೇಲೆ ಭಾನುವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ 17 ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.
ಸೈನಿಕ ಆಸ್ಪತ್ರೆಗೆ ಭೇಟಿ ಮಾಡಿದ ಮನೋಹರ್ ಪರಿಕ್ಕರ್ (ಸಂಗ್ರಹ ಚಿತ್ರ)
ಸೈನಿಕ ಆಸ್ಪತ್ರೆಗೆ ಭೇಟಿ ಮಾಡಿದ ಮನೋಹರ್ ಪರಿಕ್ಕರ್ (ಸಂಗ್ರಹ ಚಿತ್ರ)

ನವದೆಹಲಿ: ಉರಿ ಸೇನಾ ಕ್ಯಾಂಪ್ ಮೇಲೆ ಭಾನುವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ 17 ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಿ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.

ಉಗ್ರ ದಾಳಿ ನಡೆದ ಉರಿ ಸೆಕ್ಟರ್ ಗೆ ಭೇಟಿ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸೇನಾಧಿಕಾರಿಗಳಿಂದ ದಾಳಿ ಕುರಿತಂತೆ ಮಾಹಿತಿ ಪಡೆದರು. ಬಳಿಕ  ಸೇನಾಧಿಕಾರಿಗಳೊಂದಿಗೆ ಮಾತನಾಡಿದ ಅವರು ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ. ದಾಳಿ ನಡೆಸಿದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ  ಶ್ರೀನಗರದಲ್ಲಿ ಮತ್ತೆರಡು ಉಗ್ರರ ತಂಡ ಅವಿತಿರುವ ಕುರಿತು ಮಾಹಿತಿಗಳ ಬಂದ ಹಿನ್ನಲೆಯಲ್ಲಿ ಈ ಬಗ್ಗೆಯೂ ಕಟ್ಟೆಚ್ಚರದಿಂದ ಇರುವಂತೆ ಸೈನಿಕರಿಗೆ ಪರಿಕ್ಕರ್ ಸೂಚನೆ ನೀಡಿದ್ದಾರೆ. ಇನ್ನು  ಗಾಯಗೊಂಡು ಆಸ್ಪತ್ರೆ ಸೇರಿದ್ದ ಯೋಧರನ್ನು ಕಾಣಲು ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಯೋಧರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಾರೆ.

ಉರಿ ಸೆಕ್ಟರ್ ಭೇಟಿ ಬಳಿಕ ದೆಹಲಿಗೆ ಆಗಮಿಸಿದ ಮನೋಹರ್ ಪರಿಕ್ಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಉಗ್ರರ ವಿರುದ್ಧ ಕಾದಾಡಿ 17 ಮಂದಿ ಯೋಧರು ತಮ್ಮ ಬಲಿದಾನ  ನೀಡಿದ್ದಾರೆ. ಅವರ ತ್ಯಾಗ ಎಂದಿಗೂ ವರ್ಥವಾಗಲು ಬಿಡುವುದಿಲ್ಲ, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೈನ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪರಿಕ್ಕರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com