ಬರಾಕ್-8 ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ
ಪ್ರಧಾನ ಸುದ್ದಿ
ಬರಾಕ್-8 ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ
ನೆಲದಿಂದ-ಗಾಳಿಗೆ ಜಿಗಿಯುವ, ಇಸ್ರೇಲ್ ದೇಶದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬರಾಕ್-8 ಕ್ಷಿಪಣಿಯನ್ನು ಒರಿಸ್ಸಾದ ಸಮುದ್ರ ತೀರದ ರಕ್ಷಣಾ ಇಲಾಖೆಯ ನೆಲೆಯಿಂದ ಭಾರತ ಮಂಗಳವಾರ
ಭುವನೇಶ್ವರ: ನೆಲದಿಂದ-ಗಾಳಿಗೆ ಜಿಗಿಯುವ, ಇಸ್ರೇಲ್ ದೇಶದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬರಾಕ್-8 ಕ್ಷಿಪಣಿಯನ್ನು ಒರಿಸ್ಸಾದ ಸಮುದ್ರ ತೀರದ ರಕ್ಷಣಾ ಇಲಾಖೆಯ ನೆಲೆಯಿಂದ ಭಾರತ ಮಂಗಳವಾರ ಯಶಸ್ವಿಯಾಗಿ ಪರೀಕ್ಷಿಸಿದೆ.
ನೆಲದಿಂದ ಗಾಳಿಗೆ ಜಿಗಿಯುವ ಕ್ಷಿಪಣಿಯನ್ನು ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನೆಲೆಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಾಲಾಸೋರ್ ಜಿಲ್ಲೆಯ ಐಟಿರ್ ಕಾಂಪ್ಲೆಕ್ಸ್ ನಿಂದ ಮೊಬೈಲ್ ಲಾಂಚರ್ ಮೂಲಕ ಕ್ಷಿಪಣಿಯನ್ನು ಹಾರಿಸಲಾಗಿದೆ. ಶೀಘ್ರದಲ್ಲೇ ಇನ್ನು ಹಲವು ಸುತ್ತುಗಳ ಪರೀಕ್ಷೆಯನ್ನು ಡಿ ಆರ್ ಡಿ ಒ ಹಮ್ಮಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕ್ಷಿಪಣಿಯನ್ನು ಡಿ ಆರ್ ಡಿ ಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಜಂಟಿಯಾಗಿ ನಿರ್ಮಿಸಿವೆ.
70 ಕಿಲೋಮೀಟರ್ ನಿಂದ 90 ಕಿಲೋಮೀಟರ್ ತ್ರಿಜ್ಯದಲ್ಲಿ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದ್ದು, ವಾಯುದಾಳಿಯ ಸಮಯದಲ್ಲಿ ರಕ್ಷಣೆಗಾಗಿ ಬಳಸಲು ಅಭಿವೃದ್ಧಿಪಡಿಸಲಾಗಿದೆ. ಪರಮಾಣು ಶಸ್ತ್ರಾಸ್ತ್ರವನ್ನು ಹೊರುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ 4.5 ಮೀಟರ್ ಉದ್ದವಿದ್ದು, 2.7 ಟನ್ ಕೆಜಿ ತೂಗುತ್ತದೆ.
ಈ ಪರೀಕ್ಷಾ ನೆಲೆಯ 2.5 ತ್ರಿಜ್ಯದಲ್ಲಿ ವಾಸಿಸುವ ಸುಮಾರು 3500 ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ