ಭಯೋತ್ಪಾದನೆಗೂ ಪ್ರಮಾಣಪತ್ರ; ಬಯಲಾಯ್ತು ಪಾಕಿಸ್ತಾನದ ನಾಟಕ!

ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸದಾಕಾಲ ಶಾಂತಿ ಕದಡುವ ಕಾರ್ಯ ಮಾಡುತ್ತಿರುವ ಕುಖ್ಯಾತ ಉಗ್ರ ಸಂಘಟನೆ ಜಮಾತ್ ಉದ್ ದವಾ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಯೋತ್ಪಾದನೆ ತರಬೇತಿಗೂ ಪ್ರಮಾಣ ಪತ್ರ ನೀಡುವ ಮೂಲಕ ತನ್ನ ಉದ್ದೇಶವನ್ನು ಜಗಜ್ಜಾಹೀರು ಮಾಡಿದೆ.
ಪಾಕಿಸ್ತಾನದಲ್ಲಿ ನಡೆದ ಉಗ್ರ ತರಬೇತಿ ಕಾರ್ಯಾಗಾರ
ಪಾಕಿಸ್ತಾನದಲ್ಲಿ ನಡೆದ ಉಗ್ರ ತರಬೇತಿ ಕಾರ್ಯಾಗಾರ

ಇಸ್ಲಾಮಾಬಾದ್: ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸದಾಕಾಲ ಶಾಂತಿ ಕದಡುವ ಕಾರ್ಯ ಮಾಡುತ್ತಿರುವ ಕುಖ್ಯಾತ ಉಗ್ರ ಸಂಘಟನೆ ಜಮಾತ್ ಉದ್ ದವಾ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ  ಹೋಗಿ ಭಯೋತ್ಪಾದನೆ ತರಬೇತಿಗೂ ಪ್ರಮಾಣ ಪತ್ರ ನೀಡುವ ಮೂಲಕ ತನ್ನ ಉದ್ದೇಶವನ್ನು ಜಗಜ್ಜಾಹೀರು ಮಾಡಿದೆ.

ಮಾಧ್ಯಮವೊಂದು ವರದಿ ಮಾಡಿರುವಂತೆ, ಭಾರತದಿಂದ ನಿಷೇಧಕ್ಕೆ ಒಳಗಾಗಿರುವ ಉಗ್ರ ಹಫೀಜ್ ಸಯ್ಯೀದ್ ನೇತೃತ್ವದ ಜಮಾತ್ ಉದ್ ದವಾ ಉಗ್ರ ಸಂಘಟನೆಗೆ ಪಾಕಿಸ್ತಾನದಲ್ಲಿ ಸಕಲ ಸೌಕರ್ಯ ನೀಡಲಾಗುತ್ತಿದ್ದು, ಉಗ್ರ ಸಂಘಟನೆಯ ಉಗ್ರ ತರಬೇತಿ ಕಾರ್ಯಗಳಿಗೆ ಅಲ್ಲಿನ ಸರ್ಕಾರ ಸಕಲ ನೆರವು ನೀಡುತ್ತಿದೆ ಎಂಬ ಭಾರತದ ಆರೋಪಕ್ಕೆ ಪುಷ್ಠಿ ದೊರೆತಿದೆ. ಇತ್ತೀಚೆಗಷ್ಟೇ ಜೆಯುಡಿ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ನಡೆಸಿದ 2 ಉಗ್ರ ತರಬೇತಿ ಕಾರ್ಯಾಗಾರಗಳ ಮಾಹಿತಿ ಲಭ್ಯವಾಗಿದ್ದು, ಇದರಲ್ಲಿ ಪಾಲ್ಗೊಂಡ ಉಗ್ರರಿಗೆ ಪ್ರಮಾಣ ಪತ್ರ ಕೂಡ ವಿತರಿಸಲಾಗಿದೆ.

ಮೂಲಗಳ ಪ್ರಕಾರ ಜೆಯುಡಿ ಉಗ್ರ ಸಂಘಟನೆಯ ಮೊದಲೆರಡು ಉಗ್ರ ತರಬೇತಿ ಕಾರ್ಯಾಗಾರಗಳು ಪಾಕಿಸ್ತಾನದ ಗುಜ್ರನ್ ವಾಲಾ ಮತ್ತು ಸರ್ಘೋಡಾ ದಲ್ಲಿ ನಡೆದಿದೆ. ಟೀಮ್ ಬುರ್ಹಾನ್ ಎಂಬ ಹೆಸರಿನಲ್ಲಿ ಯುವಕರಿಗೆ  ಸೈಬರ್ ವಿಚಾರದ ಬಗ್ಗೆ ತರಬೇತಿ ನೀಡಿದ್ದು, ಈ ತರಬೇತಿ ಹೊಸದಾಗಿ ಸೇರಿಕೊಂಡ ಯುವಕರಿಗೆ ಪ್ರಮಾಣ ಪತ್ರ ಕೂಡ ನೀಡಲಾಗಿದೆ. ಈ ಕಾರ್ಯಾಗಾರದ ಫೋಟೋಗಳು ಇದೀಗ ಸಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದ್ದು, ಪಾಕಿಸ್ತಾನದ ಕುತಂತ್ರ ಮತ್ತೆ ಬಯಲಾಗಿದೆ.

ಮತ್ತೊಂದು ಮೂಲಗಳ ಪ್ರಕಾರ ನಿಷೇಧಿತ ಉಗ್ರ ಸಂಘಟನೆ ಸುಮಾರು 15ರಿಂದ 17 ಸಾವಿರ ಖಾತೆಗಳನ್ನು ತೆರೆದಿದ್ದು, ಈ ಖಾತೆಗಳ ಮೂಲಕ ಪಾಕಿಸ್ತಾನದ ಸೇನೆ ಮತ್ತು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐಗೆ ನೆರವು  ನೀಡುತ್ತಿದೆ.

ಇನ್ನೂ ವಿಶೇಷವೆಂದರೆ ಗುಜ್ರನ್ ವಾಲಾದಲ್ಲಿ ನಡೆದ ಕಾರ್ಯಾಗಾರದಲ್ಲಿ ಜೆಯುಡಿ ಸಂಘಟನೆಯ ಬ್ಯಾನರ್ ನಲ್ಲಿ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ಹೇಳಿಕೆಯನ್ನು ಕೋಟ್  ಮಾಡಲಾಗಿದೆ. ಈ ಹಿಂದೆ ರಾಜ್ ನಾಥ್ ಸಿಂಗ್, "ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿದೆ" ಎಂಬ ಹೇಳಿಕೆಯನ್ನು ಬರೆಯಲಾಗಿದೆ. ಈ ಹೇಳಿಕೆಗೆ ತಿರುಗೇಟು ಎಂಬಂತೆ  ಬ್ಯಾನರ್ ಮುಂದೆಯೇ ಉಗ್ರರಿಗೆ ಪ್ರಮಾಣ ಪತ್ರ ವಿತರಿಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com