ಜಾತಿ, ಧರ್ಮ, ಬಣ್ಣದ ಹೆಸರಿನಲ್ಲಿ ಯಾವುದೇ ತಾರತಮ್ಯ ಇಲ್ಲ: ರಾಜನಾಥ್

ಜಾತಿ, ಸಮುದಾಯ, ಧರ್ಮ ಮತ್ತು ಬಣ್ಣದ ಆಧಾರದ ಮೇಲೆ ಭಾರತ ತನ್ನ ನಾಗರಿಕರ ವಿರುದ್ಧ ಎಂದಿಗೂ ತಾರತಮ್ಯ ಎಸಗಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್
ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್
ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್
Updated on
ನವದೆಹಲಿ: ಜಾತಿ, ಸಮುದಾಯ, ಧರ್ಮ ಮತ್ತು ಬಣ್ಣದ ಆಧಾರದ ಮೇಲೆ ಭಾರತ ತನ್ನ ನಾಗರಿಕರ ವಿರುದ್ಧ ಎಂದಿಗೂ ತಾರತಮ್ಯ ಎಸಗಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.  
ದಕ್ಷಿಣ ಭಾರತೀಯರ ಬಣ್ಣದ ಕುರಿತು ಅವಹೇಳನಾಕಾರಿ ಮತ್ತು ಜನಾಂಗೀಯ ನಿಂದನೆಯ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ವಿಷಯವಾಗಿ ಲೋಕಸಭೆಯಲ್ಲಿ ವಿರೋಧಪಕ್ಷದ ಸದಸ್ಯರು ಗೊಂದಲ ಎಬ್ಬಿಸಿದ್ದರಿಂದ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. 
"ಈ ದೇಶದ ಎಂದೆಂದಿಗೂ ನಾಗರಿಕರನ್ನು ಜಾತಿ, ಸಮುದಾಯ ಮತ್ತು ಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡಲು ಬಿಡುವುದಿಲ್ಲ" ಎಂದು ಸಿಂಗ್ ಹೇಳಿದ್ದಾರೆ. 
ಅವರು (ವಿಜಯ್) ಈಗಾಗಲೇ ಕ್ಷಮೆ ಯಾಚಿಸಿದ್ದಾರೆ ಎಂದಿರುವ ಸಿಂಗ್ ಆ ಹೇಳಿಕೆಗಳು ಸಮರ್ಥನೀಯವಲ್ಲ ಎಂದಿದ್ದಾರೆ. 
"ಅವರು ಈಗಾಗಲೇ ಕ್ಷಮೆ ಯಾಚಿಸಿರುವುದರಿಂದ ಅದರ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತುವ ಅವಶ್ಯಕತೆಯಿಲ್ಲ" ಎಂದು ಕೂಡ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com