ವಂಶಿ ಕೃಷ್ಣನಿಗೆ ಮದುವೆಯಾಗಿದ್ದು, ಓರ್ವ ಮಗಳು ಸಹ ಇದ್ದಾಳೆ. ಆದರೆ ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಚೆನ್ನೈ ಮೂಲದ ಯುವತಿ ಏಪ್ರಿಲ್ 16ರಂದು ಚೆನ್ನೈನಿಂದ ಮುಂಬೈಗೆ ಟಿಕೆಟ್ ಬುಕ್ ಮಾಡುವಂತೆ ಮತ್ತು ಅಲ್ಲೆ ತನ್ನನ್ನು ಭೇಟಿಯಾಗುವಂತೆ ತಿಲಿಸಿದ್ದಳು. ಆದರೆ ಟಿಕೆಟ್ ಬುಕ್ ಮಾಡಲು ತನ್ನ ಬಳಿ ಹಣ ಇಲ್ಲದ ಕಾರಣ ಆರೋಪಿ ಏಪ್ರಿಲ್ 15ಕ್ಕೆ ನಕಲಿ ಟಿಕೆಟ್ ಬುಕ್ ಮಾಡಿದ್ದ. ಬಳಿಕ ಆಕೆಯ ಪ್ರಮಾಣವನ್ನು ಮುಂದೂಡಬೇಕು ಎಂಬ ಉದ್ದೇಶದಿಂದ ಮಹಿಳೆಯ ಹೆಸರಿನಲ್ಲಿ ಮುಂಬೈ ಪೊಲೀಸರಿಗೆ ಮೇಲ್ ಮಾಡಿ, ಆರು ಮಂದಿಯ ತಂಡ ಮುಂಬೈ, ಚೆನ್ನೈ ಹಾಗೂ ಹೈದರಾಬಾದ್ ನಿಂದ ಹೊರಡುವ ವಿಮಾನಗಳನ್ನು ಹೈಜಾಕ್ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವುದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.