ಟೈಮ್ಸ್ ನೂರು ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಪೇಟಿಎಂ ಶರ್ಮಾಗೆ ಸ್ಥಾನ
ನವದೆಹಲಿ: ಬಹು ನಿರೀಕ್ಷಿತ ಟೈಮ್ ಮ್ಯಾಗಜೀನ್ ನ ವಾರ್ಷಿಕ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಸ್ಥಾನ ಸಂಪಾದಿಸಿದ್ದಾರೆ.
ಪ್ರತೀ ವರ್ಷ ಬಿಡುಗಡೆಯಾಗಿರುವಂತೆ ಈ ವರ್ಷವೂ ಟೈಮ್ಸ್ ವರ್ಷದ ನೂರು ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಸಾಧಕರೂ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎನಿಸಿದೆ. ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರಿಟನ್ ಪ್ರಧಾನಿ ತೆರೆಸಾ ಮೇ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಸ್ಥಾನಪಡೆದಿದ್ದು, ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೆಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಕೂಡ ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೈಮ್ಸ್ ಪಟ್ಟಿಯಲ್ಲಿ ಐಕಾನ್, ಆರ್ಟಿಸ್ಟ್ಸ್, ಟೈಟಾನ್ ಎಂಬ ಇನ್ನೂ ಮೂರು ವಿಭಾಗಗಳಿವೆ.
ಇನ್ನು ಪಟ್ಟಿಯಲ್ಲಿ ಪೇಟಿಎಂ ಮುಖ್ಯಸ್ಥ ಶರ್ಮಾ ಅವರ ಹೆಸರು ಪ್ರಕಟವಾಗುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಆಧಾರ್ ಕಾರ್ಡ್ ಮುಖ್ಯಸ್ಥ ನಂದನ್ ನಿಲೇಕಣಿ ಅವರು, ನೋಟು ನಿಷೇಧದ ಬಳಿಕದ ಭಾರತದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡ ಶರ್ಮಾ ಈ ಗೌರವಕ್ಕೆ ಅರ್ಹರು ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ