ಜನಸೇವೆಗಾಗಿ ಸಾಮಾಜಿಕ ಮಾಧ್ಯಮಗಳ ಬಳಸಿ, ಸ್ವಪ್ರಚಾರಕ್ಕಾಗಿ ಬೇಡ: ಪ್ರಧಾನಿ ಮೋದಿ

ಅಧಿಕಾರಿಗಳು ಹೆಚ್ಚು ಸಮಯ ಆನ್‌ಲೈನ್‌ನಲ್ಲಿ ಕಳೆಯುವುದನ್ನು ವಿರೋಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಅಧಿಕಾರಿಗಳು ಹೆಚ್ಚು ಸಮಯ ಆನ್‌ಲೈನ್‌ನಲ್ಲಿ ಕಳೆಯುವುದನ್ನು ವಿರೋಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಾರ್ವಜನಿಕ ಸೇವೆಗಾಗಿ  ಸಾಮಾಜಿಕ ಮಾಧ್ಯಮಗಳನ್ನು ಬಳಸಿ, ಸ್ವಯಂ ಪ್ರಚಾರಕ್ಕಾಗಿ ಬಳಸಬೇಡಿ ಎಂದು ಶುಕ್ರವಾರ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಇಂದು ನಾಗರಿಕ ಸೇವಾ ದಿನದ ಅಂಗವಾಗಿ  ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇತ್ತೀಚಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಗಳಲ್ಲಿ ಫೋಟೋ ಕ್ಲಿಕ್ಕಿಸುವುದರಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಆದರೆ ಇದು ಸಾರ್ವಜನಿಕ ಸಮಸ್ಯೆಗಳ ಪರಿಹಾರ ಹಾಗೂ ಜನರ ಒಳಿತಿಗಾಗಿ ಬಳಕೆಯಾಗಬೇಕು ಎಂದರು.
ಪೋಲಿಯೊ ಲಸಿಕೆ ಕಾರ್ಯಕ್ರಮದ ದಿನಾಂಕವನ್ನು ಪ್ರಕಟಿಸಲು ಸಾರ್ವಜನಿಕ ಮಾಧ್ಯಮ ಬಳಸಿದರೆ ನಿಜಕ್ಕೂ ಉತ್ತಮ. ಆದರೆ, ಎರಡು ಹನಿ ಪೊಲಿಯೋ ಲಸಿಕೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಪ್ರಕಟಿಸಿ ಪ್ರಚಾರ ಮಾಡುವುದು ನಡೆಯಬಾರದು ಎಂದರು.
ಸಾಮಾಜಿಕ ಮಾಧ್ಯಮಗಳ ಸಾಮರ್ಥ್ಯದ ಅರಿವಿದೆ. ಬದಲಾದ ಕಾಲಘಟ್ಟದೊಂದಿಗೆ ಕಾರ್ಯನಿರ್ವಹಿಸುವ ಶೈಲಿಯಲ್ಲಿಯೂ ಬದಲಾವಣೆ ಅಗತ್ಯವಾಗಿದೆ ಎಂದ ಪ್ರಧಾನಿ ಮೋದಿ ಅವರು ಸುಧಾರಣೆ, ನಿರ್ವಹಣೆ ಹಾಗೂ ಪರಿವರ್ತನೆಯ ಅಗತ್ಯತೆಯನ್ನು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com