ತರಬೇತಿ ವಿಮಾನ ಪತನ
ತರಬೇತಿ ವಿಮಾನ ಪತನ

ತರಬೇತಿ ವಿಮಾನ ಪತನ; ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಸೇರಿದಂತೆ ಇಬ್ಬರ ಸಾವು

ಮಹಾರಾಷ್ಟ್ರದ ಗೋಂಡಿಯಾದ ರಾಷ್ಟ್ರೀಯ ಹಾರಾಟ ತರಬೇತಿ ಸಂಸ್ಥೆಗೆ ಸೇರಿದ ಎರಡು ಆಸನದ ತರಬೇತಿ ವಿಮಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಬುಧವಾರ ಬೆಳಗ್ಗೆ ಪತನಗೊಂಡಿದ್ದು,
Published on
ಭೋಪಾಲ್: ಮಹಾರಾಷ್ಟ್ರದ ಗೋಂಡಿಯಾದ ರಾಷ್ಟ್ರೀಯ ಹಾರಾಟ ತರಬೇತಿ ಸಂಸ್ಥೆಗೆ ಸೇರಿದ ಎರಡು ಆಸನದ ತರಬೇತಿ ವಿಮಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಬುಧವಾರ ಬೆಳಗ್ಗೆ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ.
ಈ ದುರ್ಘಟನೆ ಬೆಳಗ್ಗೆ ಸುಮಾರು ೧೦:೩೦ ಕ್ಕೆ ಮಧ್ಯಪ್ರದೇಶದ ನಕ್ಸಲ್ ಪೀಡಿತ ಬಲಘಾಟ್ ಜಿಲ್ಲೆಯ ಖೈರ್ಲಾಂಜಿ ಪ್ರದೇಶದಲ್ಲಿ ಸಂಭವಿಸಿದೆ. 
ಈ ವಿಮಾನ ಗೋಂಡಿಯಾದ ಬಿರಿಸಿ ವಿಮಾನ ನಿಲ್ದಾಣದಿಂದ ಮೇಲಕ್ಕೆ ಹಾರಿತ್ತು. 
ಮೃತಪಟ್ಟವರಲ್ಲಿ ಒಬ್ಬರು ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಎಂದು ಐಜಿಪಿ (ಬಲಘಾಟ್) ಜಿ ಜನಾರ್ಧನ್ ಹೇಳಿದ್ದಾರೆ. 
ಈ ಪತನಕ್ಕೆ ಮಾವೋವಾದಿಗಳ ಕೈವಾಡವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಹೈ ಟೆನ್ಷನ್ ವೈರ್ ಸಂಪರ್ಕಕ್ಕೆ ಈ ವಿಮಾನ ಬಂದದ್ದರಿಂದ ಪತನವಾಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿಸಿರುವುದಾಗಿ ಐಜಿ ತಿಳಿಸಿದ್ದಾರೆ. 
ದುರ್ಘಟನೆ ಸಂಭವಿಸಿದ ಜಾಗಕ್ಕೆ ಪೊಲೀಸ್ ಸೂಪರಿಂಟೆಂಡೆಂಟ್ (ಬಲಘಾಟ್) ಅಮಿತ್ ಸಿಂಗ್ ಭೇಟಿ ನೀಡಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com