
ಸುಕ್ಮಾ: 25 ಮಂದಿ ಯೋಧರ ಸಾವಿಗೆ ಕಾರಣವಾದ ಸುಕ್ಮಾ ನಕ್ಸಲ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲರು ಸುಳಿವು ನೀಡಿದವರಿಗೆ 40 ಲಕ್ಷ ರು. ಬಹುಮಾನ ಘೋಷಣೆ ಮಾಡಲಾಗಿದೆ.
ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ನ 74ನೇ ಬೆಟಾಲಿಯನ್ ಯೋಧರ ಮೇಲೆ ದಾಳಿ ಮಾಡಿದ್ದ ಸುಮಾರು 300 ಮಂದಿ ನಕ್ಸಲರು ಬರೊಬ್ಬರಿ 25 ಮಂದಿ ಯೋಧರನ್ನು ಹತ್ಯೆಗೈದಿದ್ದರು. ಈ ಪ್ರಕರಣ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ನಕ್ಸಲರ ವಿರುದ್ಧ ಕಠಿಣ ನಿಲುವು ತಳೆದಿರುವ ಕೇಂದ್ರ ಸರ್ಕಾರ ನಕ್ಸಲರ ಶತಾಯಗತಾಯ ಅವರನ್ನು ಮಟ್ಟಹಾಕಲು ನಿರ್ಧರಿಸಿದೆ. ಇದೇ ಕಾರಣಕ್ಕೆ ನಕ್ಸಲರ ಕುರಿತು ಮಾಹಿತಿ ನೀಡಿದವರಿಗೆ 40 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಇದೇ ವೇಳೆ ಛತ್ತೀಸ್ ಘಡದಲ್ಲಿ ನಕ್ಸಲರ ದಾಳಿ ಮಟ್ಟಹಾಕುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಒಟ್ಟು 28 ಬೆಟಾಲಿಯನ್ ಸೇನಾ ತುಕಡಿಗಳನ್ನು ಛತ್ತೀಸ್ ಘಡದಲ್ಲಿ ನಿಯೋಜಿಸಲಾಗಿದ್ದು, ನಕ್ಸಲ್ ಚಟುವಟಿಕೆ ವ್ಯಾಪಕವಾಗಿರುವ ಬಸ್ತಾರ್ ನಲ್ಲಿಯೇ 10 ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ಪ್ರತೀ ಬೆಟಾಲಿಯನ್ ನಲ್ಲಿ 1 ಸಾವಿರ ಯೋಧರು ಇರಲಿದ್ದಾರೆ ಎಂದು ಸಿಆರ್ ಪಿಎಫ್ ಡಿಜಿ ಸುದೀಪ್ ಲಕ್ತಾಕಿಯಾ ತಿಳಿಸಿದ್ದಾರೆ.
Advertisement