ಇಬ್ಬರು ಬ್ಯಾಂಕ್ ಸಿಬ್ಬಂದಿ 5 ಮಂದಿ ಪೊಲೀಸರ ಹತ್ಯೆಗೈದು 50 ಲಕ್ಷ ದೋಚಿದ ಉಗ್ರರು!

ಅತ್ತ ಪಾಪಿ ಪಾಕಿಸ್ತಾನದ ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದಿರುವಂತೆಯೇ ಇತ್ತ ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ಗುಂಪೊಂದು ಬ್ಯಾಂಕ್ ನ ವಾಹನವೊಂದರ ಮೇಲೆ ದಾಳಿ ಮಾಡಿ ಇಬ್ಬರು ಸಿಬ್ಬಂದಿ ಹಾಗೂ 5 ಮಂದಿ ಪೊಲೀಸರನ್ನು ಕೊಂದು 50 ಲಕ್ಷ ಹಣವನ್ನು ದೋಚಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಅತ್ತ ಪಾಪಿ ಪಾಕಿಸ್ತಾನದ ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದಿರುವಂತೆಯೇ ಇತ್ತ ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ಗುಂಪೊಂದು ಬ್ಯಾಂಕ್ ನ ವಾಹನವೊಂದರ ಮೇಲೆ ದಾಳಿ ಮಾಡಿ ಇಬ್ಬರು  ಸಿಬ್ಬಂದಿ ಹಾಗೂ 5 ಮಂದಿ ಪೊಲೀಸರನ್ನು ಕೊಂದು 50 ಲಕ್ಷ ಹಣವನ್ನು ದೋಚಿದ್ದಾರೆ.

ಸೋಮವಾರ ಈ ಭೀಕರ ಘಟನೆ ನಡೆದಿದ್ದು, ಕುಲ್ಗಾಂ ನಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಹಣದ ವಾಹನ ಸಂಚರಿಸುತ್ತಿದ್ದಾಗ ಅದರ ಮೇಲೆ ಏಕಾಏಕಿ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ವ್ಯಾನ್ ನಲ್ಲಿ ಇಬ್ಬರು ಬ್ಯಾಂಕ್  ಸಿಬ್ಬಂದಿ ಐದು ಮಂದಿ ಪೊಲೀಸ್ ಭದ್ರತಾ ಸಿಬ್ಬಂದಿಗಳು ಇದ್ದರು. ಗುಂಡಿನ ದಾಳಿ ವೇಳೆ ಎಲ್ಲ 7 ಮಂದಿ ಸಾವನ್ನಪ್ಪಿದ್ದು, ಬಳಿಕ ಉಗ್ರರು ಹಣದ ಬಾಕ್ಸ್ ನೊಂದಿಗೆ ಪರಾರಿಯಾಗಿದ್ದಾರೆ. ಬಾಕ್ಸ್ ನಲ್ಲಿ ಸುಮಾರು 50 ಲಕ್ಷ ಹಣವಿತ್ತು  ಎಂದು ತಿಳಿದುಬಂದಿದೆ.

ವ್ಯಾನ್ ಮೇಲೆ ದಾಳಿ ನಡೆಸಿದ ಉಗ್ರರು ವ್ಯಾನ್ ನಲ್ಲಿದ್ದ ಪೊಲೀಸರು ಮತ್ತು ಬ್ಯಾಂಕ್ ಸಿಬ್ಬಂದಿಗಳನ್ನು ಹೊರಗೆಳೆದು ಅವರನ್ನು ಕೊಂದು ಹಾಕಿದ್ದಾರೆ. ಬಳಿಕ ಪೊಲೀಸರ ಕೈಯಲ್ಲಿದ್ದ ಶಸ್ತ್ರಾಸ್ತ್ರ ಮತ್ತು ವ್ಯಾನ್ ನಲ್ಲಿದ್ದ  ಹಣವನ್ನು  ಉಗ್ರರು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪರಾರಿಯಾದ  ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com