ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ದಯಾನಿಧಿ ಮಾರನ್ ಸೇರಿದಂತೆ ಎಲ್ಲ ಆರು ಆರೋಪಿಗಳ ಖುಲಾಸೆ

ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಸೇರಿದಂತೆ ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದ ಎಲ್ಲ ಆರೋಪಿಗಳನ್ನು ವಿಶೇಷ ನ್ಯಾಯಾಲಯ ಗುರುವಾರ ಆರೋಪಮುಕ್ತಗೊಳಿಸಿದೆ.
ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್
ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್
ನವದೆಹಲಿ: ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಸೇರಿದಂತೆ ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದ ಎಲ್ಲ ಆರೋಪಿಗಳನ್ನು ವಿಶೇಷ ನ್ಯಾಯಾಲಯ ಗುರುವಾರ ಆರೋಪಮುಕ್ತಗೊಳಿಸಿದೆ. 
ಯುಪಿಎ-೧ ಆಡಳಿತದ ಸಮಯದಲ್ಲಿ ಮಲೇಷಿಯಾ ಉದ್ದಿಮೆದಾರ ಟಿ ಎ ಆನಂದ ಕೃಷ್ಣನ್ ಅವರಿಗೆ ಏರ್ಸೆಲ್ ಕೊಳ್ಳಲು, ಅದರ ಮಾಜಿ ಒಡೆಯ ಶಿವಸಂಕರನ್ ಮೇಲೆ ಒತ್ತಡ ಹೇರಲು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಸಹಕರಿಸಿದ್ದರು ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. 
ಮಾರನ್ ಜೊತೆಗೆ ಅವರ ಸಹೋದರ-ಉದ್ಯಮಿ ಕಲಾನಿಧಿ ಮಾರನ್, ಚನ್ನೈ ಮೂಲದ ಸನ್ ಡೈರೆಕ್ಟ್ ಟಿವಿ, ಕೃಷ್ಣನ್, ಅವರ ಸಹಾಯಕ ಅಗಸ್ಟಸ್ ರಾಲ್ಫ್ ಮಾರ್ಷಲ್ ಮತ್ತು ಮಲೇಷಿಯಾ ಮೂಲದ ಎರಡು ಸಂಸ್ಥೆಗಳಾದ ಮ್ಯಾಕ್ಸಿಸ್ ಕಮ್ಯುನಿಕೇಷನ್ಸ್ ಬರ್ಹಾದ್ ಮತ್ತು ಆಸ್ಟ್ರೋ ಏಶಿಯಾ ನೆಟ್ವರ್ಕ್ ಗಳನ್ನು ಈ ಪ್ರಕರಣದ ಆರೋಪಿಗಳನ್ನಾಗಿ ಪರಿಗಣಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com