ಕಣ್ಣೂರು ಕೊಲೆ ಪ್ರಕರಣ: ಆರು ಸಿಪಿಎಂ ಬೆಂಬಲಿಗರ ಬಂಧನ

ಸಿಪಿಎಂ ಕೈವಾಡ ಇಲ್ಲ ಎಂಬ ಪಕ್ಷದ ವಾದಕ್ಕೆ ವಿರುದ್ಧವಾಗಿ ಕಣ್ಣೂರು ಪೊಲೀಸರು, ಬುಧವಾರ ರಾತ್ರಿ ನಡೆದ ಬಿಜೆಪಿ ಕಾರ್ಯಕರ್ತ ಸಂತೋಷ್ ಅವರ ಕೊಲೆ ಆರೋಪದಲ್ಲಿ ಆರು ಸಿಪಿಎಂ ಕಾರ್ಯಕರ್ತರನ್ನು
ಪಕ್ಷದ ಕಾರ್ಯಕರ್ತನ ಕೊಲೆ ವಿರೋಧಿಸಿ ಕಣ್ಣೂರಿನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ
ಪಕ್ಷದ ಕಾರ್ಯಕರ್ತನ ಕೊಲೆ ವಿರೋಧಿಸಿ ಕಣ್ಣೂರಿನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ
Updated on: 
ಕಣ್ಣೂರು: ಸಿಪಿಎಂ ಕೈವಾಡ ಇಲ್ಲ ಎಂಬ ಪಕ್ಷದ ವಾದಕ್ಕೆ ವಿರುದ್ಧವಾಗಿ ಕಣ್ಣೂರು ಪೊಲೀಸರು,  ಬುಧವಾರ ರಾತ್ರಿ  ನಡೆದ ಬಿಜೆಪಿ ಕಾರ್ಯಕರ್ತ ಸಂತೋಷ್ ಅವರ ಕೊಲೆ ಆರೋಪದಲ್ಲಿ ಆರು ಸಿಪಿಎಂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. 
ಬಿಜೆಪಿ ಪಕ್ಷ ಈ ಕೊಲೆಯನ್ನು ವಿರೋಧಿಸಿ ಧರಣಿ ನಡೆಸಿದ್ದು, ಈ ದಾಳಿಯ ಹಿಂದೆ ಸಿಪಿಎಂ ಕೈವಾಡ ಇದೆ ಎಂದು ಆರೋಪಿಸಿತ್ತು ಆದರೆ ಸಿಪಿಎಂ ಮುಖಂಡರು ಇದನ್ನು ನಿರಾಕರಿಸಿದ್ದರು. 
ಈಗ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಿರುವುದು, ಇದು ರಾಜಕೀಯ ದ್ವೇಷಪೂರಿತ ಕೊಲೆ ಇರಬಹುದೇ ಎಂಬ ಸಂದೇಹಗಳನ್ನು ಹುಟ್ಟಿಸಿದೆ. 
ಕಳೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸಂತೋಷ್ ಸ್ಪರ್ಧಿಸಿದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com