ದೆಹಲಿಯಲ್ಲಿ ತ್ಯಜಿಸಿಹೋದ ನಾಲ್ಕು ತಿಂಗಳ ಹೆಣ್ಣುಮಗು ಪತ್ತೆ

ದೆಹಲಿಯ ಹೊರವಲಯದಲ್ಲಿ ದೇವಾಸ್ಥಾನದ ಬಳಿ ಯಾರೋ ತೊರೆದು ಹೋಗಿದ್ದ ನಾಲ್ಕು ತಿಂಗಳ ಹೆಣ್ಣು ಮಗು ಶನಿವಾರ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿಯ ಹೊರವಲಯದಲ್ಲಿ ದೇವಾಸ್ಥಾನದ ಬಳಿ ಯಾರೋ ತೊರೆದು ಹೋಗಿದ್ದ ನಾಲ್ಕು ತಿಂಗಳ ಹೆಣ್ಣು ಮಗು ಶನಿವಾರ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ತುಘಲಕಾಬಾದ್ ಗ್ರಾಮದ ದೇವಾಲಯದ ಅರ್ಚಕರು ಬೆಳಗ್ಗು ಸುಮಾರು ೮ ಘಂಟೆಗೆ ಕೂಸನ್ನು ಕಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 
ಪೊಲೀಸರು ಹೇಳುವಂತೆ ದೇವಾಲಯದಲ್ಲೇ ತಂಗುವ ಅರ್ಚಕ ಸಂದೀಪ್ ಶಾಸ್ತ್ರಿ ಬೆಳಗಿನ ಜಾವದಲ್ಲಿ ವಿಸರ್ಜನೆಗೆಂದು ಹೊರಗೆ ಹೋದಾಗ ಚಳಿ ಮತ್ತು ಹಸಿವಿನಿಂದ ಅಳುತ್ತಿದ್ದ ಹಸಿಗೂಸನ್ನು ಕಂಡಿದ್ದಾರೆ. ಆ ಮಗುವಿನ ಬಗ್ಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಚಾರಿಸಿ ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 
"ನನಗೆ ಮಗು ಅಳುತ್ತಿರುವುದು ಕೇಳಿಸಿತು ಮತ್ತು ನಾನು ಸಹಾಯಕ್ಕೆ ಧಾವಿಸಿದೆ. ಅದೃಷ್ಟವಶಾತ್ ಆಹಾರಕ್ಕಾಗಿ ದೇವಸ್ಥಾನದ ಸುತ್ತ ಸುತ್ತುವ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿರಲಿಲ್ಲ. ಈ ಅರಣ್ಯ ಪ್ರದೇಶದಲ್ಲಿ ಮಗುವಿನ ಪೋಷಕರು ಬೆಳಗಿನ ಜಾವದಲ್ಲಿ ತೊರೆದು ಹೋಗಿದ್ದಾರೆ" ಎಂದು ಶಾಸ್ತ್ರಿ ಹೇಳಿದ್ದಾರೆ. 
ಕೂಸನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. "ಮಗು ಆರೋಗ್ಯವಾಗಿದೆ. ಖಾಸಗಿ ಎನ್ ಜಿ ಒ ಗಳ ಸಹಾಯ ಕೇಳಿದ್ದೇವೆ"ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. "ಪೋಷಕರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಗುವಿನ ಫೋಟೋ ಹಿಡಿದು ತಾಯಿಯನ್ನು ಹುಡುಕಲು ತಂಡವೊಂದು ಕೆಲಸ ಮಾಡುತ್ತಿದೆ" ಎಂದು ಅಧಿಕಾರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com