ನಜೀಬ್ ಅಹ್ಮದ್ ಪ್ರಕರಣ; ಜೆ ಎನ್ ಯುಗೆ ಭೇಟಿ ನೀಡಿದ ಸಿಬಿಐ

ಆಡಳಿತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಸಿಬಿಐ ಅಧಿಕಾರಿಗಳು ಸೋಮವಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಕಳೆದ ಅಕ್ಟೋಬರ್ ನಲ್ಲಿ ಜೆ ಎನ್ ಯು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಡಳಿತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಸಿಬಿಐ ಅಧಿಕಾರಿಗಳು ಸೋಮವಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಕಳೆದ ಅಕ್ಟೋಬರ್ ನಲ್ಲಿ ಜೆ ಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಕಾಣೆಯಾದ ಪ್ರಕರಣ ಕುರಿತ ತನಿಖೆ ಇದಾಗಿದೆ. 
ಕಳೆದ ೧೦ ದಿನಗಳಲ್ಲಿ ಸಿಬಿಐ ವಿಶ್ವವಿದ್ಯಾಲಯಕ್ಕೆ ನಾಲ್ಕು ಬಾರಿ ಭೇಟಿ ನೀಡಿದೆ. ದೆಹಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ಯಾವುದೇ ಸುಳಿವು ಪತ್ತೆಹಚ್ಚಲು ಸಾಧ್ಯವಾಗದೆ ಹೋದದ್ದರಿಂದ, ದೆಹಲಿ ಹೈಕೋರ್ಟ್ ಇದನ್ನು ಸಿಬಿಐಗೆ ವರ್ಗಾಯಿಸಿತ್ತು. ಸಿಬಿಐ ಜೂನ್ ೩ ರಂದು ಈ ಪ್ರಕರಣದಲ್ಲಿ ಆರೋಪಪಟ್ಟಿ ಸಿದ್ಧಪಡಿಸಿತ್ತು. 
ನಜೀಬ್ ೨೭ ವರ್ಷದ ಎಂ ಎಸ್ ಸಿ ವಿದ್ಯಾರ್ಥಿ ಅಕ್ಟೋಬರ್ ೧೪-೧೫ ರ ಮಧ್ಯರಾತ್ರಿಯಿಂದ ಜೆ ಎನ್ ಯು ಹಾಸ್ಟೆಲ್ ನಿಂದ ಕಾಣೆಯಾಗಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರೀಯ ಸ್ವಯಂಸೇವಕ ದಳದ ವಿದ್ಯಾರ್ಥಿ ಘಟಕ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಸದಸ್ಯರು ನಜೀಬ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. 
ನಜೀಬ್ ಕಾಣೆಯಾಗಿರುವುದಕ್ಕೆ ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಆರೋಪವನ್ನು ಎಬಿಪಿವಿ ಅಲ್ಲಗೆಳೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com