ವೈದ್ಯಕೀಯ ನೆಲೆ: ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಬಿಡುಗಡೆಗೊಳಿಸಿದ ಚೈನಾ ಸರ್ಕಾರ

ಚೈನಾದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಲಿಯು ಕ್ಸಿಯೋಬೋ ಅವರನ್ನು ವೈದ್ಯಕೀಯ ನೆಲೆಯ ಮೇಲೆ ಬಿಡುಗಡೆ ಮಾಡಲಾಗಿದೆ. ಅವರಿಗೆ ಯಕೃತ್ತು ಕ್ಯಾನ್ಸರ್ ರೋಗ ಇರುವದು ತಿಳಿದುಬಂದಿದ್ದು
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಲಿಯು ಕ್ಸಿಯೋಬೋ
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಲಿಯು ಕ್ಸಿಯೋಬೋ
ಬೀಜಿಂಗ್: ಚೈನಾದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಲಿಯು ಕ್ಸಿಯೋಬೋ ಅವರನ್ನು ವೈದ್ಯಕೀಯ ನೆಲೆಯ ಮೇಲೆ ಬಿಡುಗಡೆ ಮಾಡಲಾಗಿದೆ. ಅವರಿಗೆ ಯಕೃತ್ತು ಕ್ಯಾನ್ಸರ್ ರೋಗ ಇರುವದು ತಿಳಿದುಬಂದಿದ್ದು, ಈ ವಿಷಯವನ್ನು ಅವರ ವಕೀಲ ಸೋಮವಾರ ಧೃಢೀಕರಿಸಿದ್ದಾರೆ. 
ಮೇ ೨೩ ರಂದು ಲಿಯು ಅವರಿಗೆ ಕ್ಯಾನ್ಸರ್ ಇರುವುದು ತಿಳಿದುಬಂದ ಮೇಲೆ ಅವರಿಗೆ ಲಿಅಯೋನಿಂಗ್ ಪ್ರಾಂತ್ಯದ ಶೆನ್ಯಾಂಗ್ ನ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ವಕೀಲ ಮೊ ಶಾಓಪಿಂಗ್ ಹೇಳಿದ್ದಾರೆ.
ಚೈನಾ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದ ಲಿಯು ಅವರಿಗೆ ೨೦೧೦ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೇಶದ ಅಧಿಕಾರ ಉರುಳಿಸುವ ಪ್ರಯತ್ನದ ಆರೋಪದ ಮೇಲೆ ಅವರಿಗೆ ಪ್ರಶಸ್ತಿ ಬರುವುದಕ್ಕೂ ಮೊದಲೇ ೧೧ ವರ್ಷ ಜೈಲುಶಿಕ್ಷೆ ನೀಡಲಾಗಿತ್ತು. 
ದೇಶದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯ, ಬಹು ಪಕ್ಷಗಳ ವ್ಯವಸ್ಥೆಯನ್ನು ಜಾರಿ ಮಾಡಬೇಕು ಮತ್ತು ಎಲ್ಲರಿಗು ಸಾಂವಿಧಾನಿಕ ಹಕ್ಕುಗಳು ದೊರಯುವಂತಾಗಬೇಕು ಎಂದು ಆಗ್ರಹಿಸಿ ರಾಜಕೀಯ ಪ್ರಣಾಳಿಕೆಗೆ ಸಹಿ ಮಾಡಿದ್ದ ೩೦೦ ಜನ ಚೈನಾ ಬುದ್ಧಿಜೀವಿಗಳಲ್ಲಿ ಲಿಯು ಕೂಡ ಒಬ್ಬರು. ಆನಂತರ ಅವರನ್ನು ಬಂಧಿಸಲಾಗಿತ್ತು. 
ಆಸ್ಪತ್ರೆಯಲ್ಲಿ ಸ್ಥಿರವಾಗಿದ್ದ ಅವರನ್ನು ಭೇಟಿ ಮಾಡಲು ಕುಟುಂಬಕ್ಕೆ ೧೦ ದಿನಗಳ ಹಿಂದೆ ಅವಕಾಶ ನೀಡಲಾಗಿತ್ತು ಎಂದು ವಕೀಲರು ಹೇಳಿದ್ದಾರೆ. ಲೀಯು ಅವರ ಪತ್ನಿ ಲಿಯು ಕ್ಸಿಯಾ ಅವರನ್ನು ಇಲ್ಲಿಯವರೆಗೂ ಗೃಹಬಂಧನದಲ್ಲಿ ಇರಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com