ಮೋದಿ ಸರ್ಕಾರ ಸೇನೆಯ ಸಾಧನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ: ಡಿಂಪಲ್ ಯಾದವ್

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್, ಮೋದಿ ಸರ್ಕಾರ ಸೇನೆಯ
ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್
ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್
ಭದೋಹಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್, ಮೋದಿ ಸರ್ಕಾರ ಸೇನೆಯ ಸಾಧನೆಗಳಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. 
"ನಾನು ಯೋಧನ ಮಗಳು. ನಮ್ಮ ಯೋಧರ ಹುತಾತ್ಮತೆಯಿಂದ ಇವರು (ಮೋದಿ ಸರ್ಕಾರ) ಲಾಭ ಪಡೆಯುತ್ತಿದ್ದಾರೆ. ಅವರು ಸೇನೆಯನ್ನು ರಾಜಕೀಯಗೊಳಿಸುತ್ತಿದ್ದಾರೆ... ಈ ಹಿಂದೆ ಎಂದು ಇಂತಹ ಸರ್ಕಾರ ನೋಡಿರಲಿಲ್ಲ" ಎಂದು ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಸಮಾಜವಾದಿ ಪಕ್ಷದ ತಾರಾ ಪ್ರಚಾರಕಿ ಹೇಳಿದ್ದಾರೆ. 
ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದ ವಿರುದ್ಧವೂ ಹರಿಹಾಯ್ದ ಡಿಂಪಲ್, ಜನ ತಮ್ಮ ಹಣಕ್ಕಾಗಿ ಬೀದಿ ಸುತ್ತುವಂತಾಯಿತು ಎಂದಿದ್ದಾರೆ, "'ಅಚ್ಛೇ ದಿನದ ವಚನ ನೀಡಿದ್ದ ಮೋದಿ ಸರ್ಕಾರ 'ನೋಟು ಹಿಂಪಡೆಯಿತು... ನೀವು ಕಷ್ಟ ಪಟ್ಟು ದುಡಿದ ಹಣವನ್ನು ಬ್ಯಾಂಕ್ ನಿಂದ ಹಿಂಪಡೆಯಲು ಬೀದಿ ಸುತ್ತುವಂತೆ ಮಾಡಿದರು... ಈ ದಿನದವರೆಗೂ ವಸೂಲಿ ಮಾಡಿದ ಕಪ್ಪು ಹಣದ ಬಗ್ಗೆ ವಿವರವಿಲ್ಲ" ಎಂದು ಕನೌಜ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಡಿಂಪಲ್ ಹೇಳಿದ್ದಾರೆ. 
ಬಿಜೆಪಿ ಅಧ್ಯಕ್ಷ ಅಮಿತ್ ಷಾ ವಿರುದ್ಧ ಕೂಡ ವಾಗ್ದಾಳಿ ನಡೆಸಿದ ಡಿಂಪಲ್ "ಸುಳ್ಳು ಭರವಸೆಗಳನ್ನು ನೀಡುವುದು ಇವರಿಗೆ ಅಭ್ಯಾಸವಾಗಿಬಿಟ್ಟಿದೆ. .. ಮಾಧ್ಯಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ ಆದರೆ ಭ್ರಷ್ಟಾಚಾರ ಕಡಿವಾಣದ ಬಗ್ಗೆ ತಮ್ಮ ಮಾತು ಉಳಿಸಿಕೊಳ್ಳುವುದಿಲ್ಲ. 
"ನಮ್ಮ ಈ ಗುಜರಾತಿ ಸಹೋದರನ (ಅಮಿತ್ ಷಾ) ಬಗ್ಗೆ ನಿಮಗೆ ಅರಿವಿರಬೇಕು... ಕೇಂದ್ರದ ವಿಫಲತೆಯನ್ನು, ನಕಲಿ ಅಂಕಿಅಂಶ ನೀಡಿ ಇತರ ರಾಜ್ಯಗಳ ಮುಖಂಡರ ಮೇಲೆ ಹೊರಿಸುವುದು ಕೂಡ ಇವರ ವೈಫಲ್ಯ" ಎಂದು ಡಿಂಪಲ್ ಹೇಳಿದ್ದಾರೆ. 
ಬ್ಯಾಂಕ್ ಗಳಲ್ಲಿ ಹೊಸದಾಗಿ ಘೋಷಿಸಿರುವ ವಹಿವಾಟು ಶುಲ್ಕ ಹಾಗು ಸಬ್ಸಿಡಿ ತೊರೆದಿರುವವರಿಗೆ ಎಲ್ ಪಿ ಜಿ ದರ ಏರಿಸಿರುವದರ ಬಗ್ಗೆಯೂ ಕೇಂದ್ರ ಸರ್ಕಾರವನ್ನು ಡಿಂಪಲ್ ತರಾಟೆಗೆ ತೆಗೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com