ಸಮಾಜವಾದಿ ಪಕ್ಷ ಪ್ರಚಾರಕ್ಕೆ ಮೆರುಗು ನೀಡಿರುವ ಡಿಂಪಲ್ 'ಭಾಭಿ'

ಉತ್ತರ ಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಮೊದಲ ಕುಟುಂಬದ ಸೊಸೆ ಮಿತವಚನದ, ಸೌಮ್ಯ ಭಾಷಿಕ ಡಿಂಪಲ್ ಯಾದವ್, ಪಕ್ಷದ ಸಾರ್ವಜನಿಕ ಸಭೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವಲ್ಲಿ
ಡಿಂಪಲ್ ಯಾದವ್
ಡಿಂಪಲ್ ಯಾದವ್
ಲಖನೌ: ಉತ್ತರ ಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಮೊದಲ ಕುಟುಂಬದ ಸೊಸೆ ಮಿತವಚನದ, ಸೌಮ್ಯ ಭಾಷಿಕ  ಡಿಂಪಲ್ ಯಾದವ್, ಪಕ್ಷದ ಸಾರ್ವಜನಿಕ ಸಭೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವಲ್ಲಿ ಸಫಲರಾಗಿದ್ದಾರೆ. 
ಕೆಲವು ತಿಂಗಳ ಹಿಂದೆ ಕೌಶಲ್ ವಿಕಾಸ್ ಯೋಜನೆ ಬಗ್ಗೆ ಸಂಸತ್ತಿನಲ್ಲಿ ಮಾತಾಡುವಾಗ ಬರೆದುಕೊಂಡ ಭಾಷಣದ ಪ್ರತಿಯನ್ನು ಓದುತ್ತಿದ್ದಾಗ ಆಗಾಗ ಸರಿಪಡಿಸಿಕೊಳ್ಳುತ್ತಿದ್ದ ೩೯ ವರ್ಷದ ನಾಯಕಿ ಈಗ ಸಾಕಷ್ಟು ಚೇತರಿಸಿಕೊಂಡಿದ್ದಾರೆ.
ಹೊಸ ಡಿಂಪಲ್ - ತಾರಾ ಪ್ರಚಾರಕಿ ಈಗ ಯುವ ಜನತೆಯನ್ನು ತಮ್ಮ ಭಾಷಣದಿಂದ ಸೆಳೆಯುವಲ್ಲಿ ಸಫಲರಾಗಿದ್ದು ಅವರನ್ನು ಮೋಡಿ ಮಾಡುತ್ತಿದ್ದಾರೆ ಕೂಡ!
'ಸೊಸೆ' ಮತ್ತು 'ಅತ್ತಿಗೆಯ' ಪಾತ್ರವನ್ನು ವಹಿಸಿಕೊಂಡು ಆಗಾಗ ಯುವಕರಿಗೆ ಪ್ರೀತಿಯಿಂದ ಎಚ್ಚರಿಸುತ್ತಾ ನಿಮ್ಮ ಅಣ್ಣನಿಗೆ (ಅಖಿಲೇಶ್ ಯಾದವ್) ದೂರು ನೀಡುತ್ತೇನೆ ಎನ್ನುತ್ತಾ, ಹಿರಿಯರ ಬಗ್ಗೆ ಗೌರವದ ಮಾತುಗಳನ್ನಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವತ್ತ ಮುನ್ನಡೆದಿದ್ದಾರೆ. 
ಅಲಹಾಬಾದ್ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಗಲಾಟೆ ಎಬ್ಬಿಸಿದಾಗ "ನನಗೆ ಮಾತನಾಡಲು ಬಿಡಲಿಲ್ಲ ಎಂದು ನಾನು ನಿಮ್ಮ ಅಣ್ಣನಿಗೆ (ಅಖಿಲೇಶ್) ಹೇಳುತ್ತೇನೆ. ನಾನು ದೂರು ನೀಡುತ್ತೇನೆ... ಅಣ್ಣ ನಾಳೆ ಇಲ್ಲಿಗೆ ಬರಲಿದ್ದಾರೆ" ಎಂದಿದ್ದರು. 
ಜೌನ್ಪುರದಲ್ಲಿ ಭಾಷಣ ಪ್ರಾರಂಭಿಸಿದಾಗ ಯುವಕರ ಮತ್ತು ಹಿರಿಯರ ಹೃದಯ ಗೆಲ್ಲುವಂತೆ  ಮಾತನಾಡಿದ್ದ ಅವರು "ನಾನು ಪೂರ್ವಾಂಚಲಕ್ಕೆ ಮೊದಲ ಬಾರಿಗೆ ಬರುತ್ತಿದ್ದೇನೆ. ನನಗೆ ಉಡುಗೊರೆಯಾಗಿ ನೀವೆಲ್ಲಾ ಮತಗಳನ್ನು ನೀಡಲಿದ್ದೀರಾ ಎಂಬ ಭರವಸೆಯಿದೆ" ಎಂದಿದ್ದರು. 
ಕೌಟುಂಬಿಕ ಕಲಹದಿಂದ ಪ್ರಚಾರಕ್ಕೆ ಇತರ ಸದಸ್ಯರ ಬೆಂಬಲ ಕಳೆದುಕೊಂಡು ಒಬ್ಬಂಟಿಯಾಗಿದ್ದ ಅಖಿಲೇಶ್ ಯಾದವ್ ಅವರಿಗೆ ಈಗ ಸಾಥ್ ನೀಡಲು ತಮ್ಮ ಪತ್ನಿಯೇ ಬೆನ್ನಿಗೆ ನಿಂತಿರುವುದು ವರವಾಗಿ ಪರಿಣಮಿಸಿದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com