ಆರ್ ಎಸ್ ಎಸ್ ವಿರೋಧಿ ಹೇಳಿಕೆ; ಬರೇಲಿ ಕಾಲೇಜಿನಲ್ಲಿ ಎಬಿವಿಪಿ ದಾಂಧಲೆ

ಆರ್ ಎಸ್ ಎಸ್ ಸಂಸ್ಥಾಪಕ ಎಂ ಎಸ್ ಗೊಲ್ವಾಳ್ಕರ್ ಮತ್ತು ಸದರಿ ಅಧ್ಯಕ್ಷ ಮೋಹನ್ ಭಾಗವತ್ ವಿರುದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಒಬ್ಬರು ವಿವಾದಾತ್ಮಕ ಹೇಳಿಕೆಗಳನ್ನು
ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್
ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್
ಬರೇಲಿ: ಆರ್ ಎಸ್ ಎಸ್ ಸಂಸ್ಥಾಪಕ ಎಂ ಎಸ್ ಗೊಲ್ವಾಳ್ಕರ್ ಮತ್ತು ಸದರಿ ಅಧ್ಯಕ್ಷ ಮೋಹನ್ ಭಾಗವತ್ ವಿರುದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಒಬ್ಬರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿ ಬರೇಲಿ ಕಾಲೇಜಿನಲ್ಲಿ ಎಬಿವಿಪಿ ಸದಸ್ಯರು ದಾಂಧಲೆ ನಡೆಸಿದ್ದರಿಂದ ಆತಂಕಕಾರಿ ಸ್ಥಿತಿಗೆ ಎಡೆಮಾಡಿಕೊಟ್ಟಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ಘಟಕ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ಸದಸ್ಯರು ಆವರಣದಲ್ಲಿ ಖುರ್ಚಿ ಮಾತು ಮೇಜುಗಳನ್ನು ಒಡೆದು ಪುಡಿಗುಟ್ಟಿದ್ದಕ್ಕೆ ಆತಂಕಕಾರಿ ವಾತಾವರಣ ನಿರ್ಮಾಣವಾಗಿ ಸೆಮಿನಾರ್ ಒಂದನ್ನು ರದ್ದು ಮಾಡಲಾಗಿದೆ. ನೆನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರೊಫೆಸರ್ ಚೌತಿ ರಾಮ್ ಯಾದವ್ ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಪ್ರತಿಕ್ರಿಯೆ ನೀಡಿದ್ದಾರೆ ಮತ್ತು ಅವರ ಅವಿರುದ್ಧ ದೂರು ದಾಖಲಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಈ ದಾಂಧಲೆ ನಡೆಸಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. 
ಈ ಕಾಲೇಜನ್ನು ಮತ್ತೊಂದು ಜೆ ಎನ್ ಯು ಆಗಲು ಬಿಡುವುದಿಲ್ಲ ಎಂಬ ಘೋಷಣೆಗಳನ್ನು ಕೂಡ ಎಬಿವಿಪಿ ಸದಸ್ಯರು ಕೂಗಿದ್ದಾರೆ. ನಂತರ ಸೆಮಿನಾರ್ ರದ್ದು ಪಡಿಸಿದ ಆಯೋಜಕರು ಯಾದವ್ ಅವರನ್ನು ಸುರಕ್ಷಿತವಾಗಿ ಆವರಣದಿಂದ ಹೊರಗೆ ಕರೆದೊಯ್ದಿದ್ದಾರೆ, 
ಭಾಗವತ್ ಅವರ ಹೆಸರನ್ನು ಎತ್ತಿಕೊಂಡೆ ಇಲ್ಲ ಎಂದು ತಿಳಿಸಿ ಕ್ಷಮೆ ಕೋರಿದ್ದರೂ ಯಾದವ್ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ 
"ಅವರ ವಿರುದ್ಧ ಬಂದ ದೂರಿನ ಆಧಾರದ ಮೇಲೆ ಭಾನುವಾರ ತಡರಾತ್ರಿಯಲ್ಲಿ ಯಾದವ್ ವಿರುದ್ಧ ಬರ್ದಾರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಕೊಳ್ಳಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಕಾಲೇಜಿನ ಹೊರಗೆ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ" ಎಂದು ಬರೇಲಿ ನಗರ ಎಸ್ ಪಿ ಸಮೀರ್ ಸೌರಭ್ ಹೇಳಿದ್ದಾರೆ. 
ನಂತರ ಸ್ಪಷ್ಟನೆ ನೀಡಿರುವ ಯಾದವ್ "ನಾನು ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಹೆಸರು ತೆಗೆದುಕೊಂಡೆ ಇಲ್ಲ.. ನನ್ನ ಹೇಳಿಕೆ ಯಾರಿಗಾದರೂ ನೋಯಿಸಿದ್ದರೆ ನಾನು ಕ್ಷಮೆ ಕೋರುತ್ತೇನೆ" ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com