
ಲಂಡನ್: ಐದು ಜನರ ಸಾವಿಗೆ ಕಾರಣವಾದ ಲಂಡನ್ ಸಂಸತ್ ಬಳಿಯ ಉಗ್ರ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಉಗ್ರ ದಾಳಿಯನ್ನು ಖಂಡಿಸಿದ್ದು, ಸಾವನ್ನಪ್ಪಿದವರ ಕುರಿತಂತೆ ಸಂತಾಪ ಸೂಚಿಸಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಲಂಡನ್ ಸಂಸತ್ ಬಳಿಯ ಉಗ್ರ ದಾಳಿಯಲ್ಲಿ ಹಲವರು ಮೃತಪಟ್ಟ ವಿಚಾರ ಕೇಳಿ ತುಂಬಾ ನೋವಾಯಿತು. ಸಂತ್ರಸ್ತ ಕುಟುಂಬಗಳೊಂದಿಗೆ ನಾವಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಭಯೋಕ್ಪಾದನೆ ವಿರುದ್ಧ ಕಿಡಿಕಾರಿರುವ ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧ ಬ್ರಿಟನ್ ಹೋರಾಟದಲ್ಲಿ ಸದಾಕಾಲ ಭಾರತದ ಜೊತೆಗಿರುತ್ತದೆ ಎಂದು ಭರವಸೆ ನೀಡಿದ್ದಾರೆ.
ಬುಧವಾರ ಲಂಡನ್ ಸಂಸತ್ ಭವನದ ಬಳಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
Advertisement