ಪ್ರತಿಭಟನೆ ಹಿನ್ನಲೆಯಲ್ಲಿ ರಜನಿಕಾಂತ್ ಲಂಕಾ ಭೇಟಿ ರದ್ದು, ನಾ ರಾಜಕಾರಣಿ ಅಲ್ಲ ಎಂದ ತಲೈವಾ

ರಾಜಕೀಯ ನಾಯಕರ ಮನವಿ ಹಿನ್ನೆಲೆಯಲ್ಲಿ ಎರಡು ದಿನಗಳ ತಮ್ಮ ಶ್ರೀಲಂಕಾ ಭೇಟಿಯನ್ನು ರದ್ದುಗೊಳಿಸಿರುವುದಾಗಿ ಶನಿವಾರ ಸೂಪರ್....
ರಜನಿಕಾಂತ್
ರಜನಿಕಾಂತ್
ಚೆನ್ನೈ: ರಾಜಕೀಯ ನಾಯಕರ ಮನವಿ ಹಿನ್ನೆಲೆಯಲ್ಲಿ ಎರಡು ದಿನಗಳ ತಮ್ಮ ಶ್ರೀಲಂಕಾ ಭೇಟಿಯನ್ನು ರದ್ದುಗೊಳಿಸಿರುವುದಾಗಿ ಶನಿವಾರ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೇಳಿದ್ದಾರೆ.
ತಮಿಳು ರಾಜಕೀಯ ನಾಯಕರ ಮನವಿ ಹಿನ್ನಲೆಯಲ್ಲಿ ತಾವು ಲೈಕಾ ಗ್ರೂಪ್ ನ ಜ್ಞಾನಂ ಫೌಂಡೇಶನ್ ಕಾರ್ಯಕ್ರಮದಿಂದ ದೂರ ಉಳಿಯುತ್ತಿರುವುದಾಗಿ ರಜನಿಕಾಂತ್ ಇಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಾನು ರಾಜಕೀಯ ನಾಯಕ ಅಲ್ಲ. ನಾನೊಬ್ಬ ಕಲಾವಿದ. ಒಂದು ವೇಳೆ ಮತ್ತೆ ಲಂಕಾಗೆ ಭೇಟಿ ನೀಡುವ ಅವಕಾಶ ಸಿಕ್ಕರೆ ತಡೆಯಬೇಡಿ ಎಂದು ತಲೈವಾ ಮನವಿ ಮಾಡಿದ್ದಾರೆ.
ನಿಗದಿಯಂತೆ ಏ.9ಕ್ಕೆ ರಜನಿಕಾಂತ್ ಶ್ರೀಲಂಕಾದ ಜಾಫ್ನಾಕ್ಕೆ ತೆರಳಿ, ನಿರಾಶ್ರಿತ ತಮಿಳಿರಿಗಾಗಿ 22 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 150 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ತಮಿಳು ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು, ತಮಿಳರನ್ನು ಕಡೆಗಣಿಸುವ ಶ್ರೀಲಂಕಾಕ್ಕೆ ಭೇಟಿ ನೀಡಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.
ತಿರುಮಾವಲಾವನ್ ನೇತೃತ್ವದ ವಿಸಿಕೆ ಮತ್ತು ವೈಕೋ ನೇತೃತ್ವದ ಎಂಡಿಎಂಕೆ ಸಂಘಟನೆಗಳು ರಜನಿಕಾಂತ್ ಶ್ರೀಲಂಕಾ ಭೇಟಿಯನ್ನು ತೀವ್ರ ವಿರೋಧಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com