ಇಡೀ ದೇಶವೇ ಹುತಾತ್ಮ ಯೋಧರ ಕುಟುಂಬಗಳ ಜವಾಬ್ದಾರಿ ತೆಗೆದುಕೊಳ್ಳಬೇಕು : ಕಿರಣ್ ಬೇಡಿ

ಜಮ್ಮು ಕಾಶ್ಮೀರದ ಕೃಷ್ಣಾ ಘಟಿಯಲ್ಲಿ ಇಬ್ಬರು ಭಾರತೀಯ ಯೋಧರ ರುಂಡ ಕತ್ತರಿಸಿರುವ ಪಾಕಿಸ್ತಾನ ಕ್ರಮಕ್ಕೆ ಪುದುಚೆರಿ ಉಪ ರಾಜ್ಯಪಾಲೆ ಕಿರಣ್ ಬೇಡಿ ತೀವ್ರವಾಗಿ ..
ಕಿರಣ್ ಬೇಡಿ
ಕಿರಣ್ ಬೇಡಿ
ನವದೆಹಲಿ: ಜಮ್ಮು ಕಾಶ್ಮೀರದ ಕೃಷ್ಣಾ ಘಟಿಯಲ್ಲಿ ಇಬ್ಬರು ಭಾರತೀಯ ಯೋಧರ ರುಂಡ ಕತ್ತರಿಸಿರುವ ಪಾಕಿಸ್ತಾನ ಕ್ರಮಕ್ಕೆ ಪುದುಚೆರಿ ಉಪ ರಾಜ್ಯಪಾಲೆ ಕಿರಣ್ ಬೇಡಿ ತೀವ್ರವಾಗಿ ಖಂಡಿಸಿದ್ದಾರೆ.
ಹುತಾತ್ಮರಾದ ಯೋಧರ ಕುಟುಂಬಗಳ ಸಾಮಾಜಿಕ ಮತ್ತು ನೈತಿಕ ಬೆಂಬಲಕ್ಕಾಗಿ ಇಡೀ ದೇಶವೇ  ಹುತಾತ್ಮ ಯೋಧರ ಕುಟುಂಬಗಳ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಹುತಾತ್ಮ ಯೋಧರ ಕುಟುಂಬ ಒಬ್ಬಂಟಿಯಲ್ಲ, ಇಡೀ ದೇಶವೇ ಅವರ ಬೆಂಬಲಕ್ಕಿದೆ, ದೇಶದ ಎಲ್ಲರೂ ಅವರನ್ನು ಬೆಂಬಲಿಸಲು ಹಾಗೂ ಅವರಿಗೆ ಸ್ಥೈರ್ಯ ತುಂಬಲು ಮುಂದಾಗಬೇಕು, ಅವರಿಗೆ ಸಹಾಯ ಮಾಡಬೇಕು ಎಂದು ಕಿರಣ್ ಬೇಡಿ ಕರೆ ನೀಡಿದ್ದಾರೆ.
ಹುತಾತ್ಮ ಯೋಧರ ಕುಟುಂಬ ನಮ್ಮ ಕುಟುಂಬವಿದ್ದಂತೆ, ನಾವು ಅವರಿಗೆ ಸಹಾಯ ಹಾಗೂ ನೆರವು ನೀಡಬೇಕು. ಸರ್ಕಾರ ಉತ್ತಮ ಕ್ರಮ ಕೈಗೊಳ್ಳುತ್ತದೆ ಎಂಬ ನಂಬಿಕೆಯಿದೆ ಎಂದು ಅವರು ಭರವಸೆ ವ್ಯಕ್ತ ಪಡಿಸಿದ್ದಾರೆ.
ಗಡಿ ದಾಟಿ ಭಾರತೀಯ ಗಡಿಯೊಳಗೆ ನುಸುಳಿದ ಪಾಕಿಸ್ತಾನ ಸೇನೆಯ ಯೋಧರು ಗುಂಡಿನ ದಾಳಿ ವೇಳೆ ಸಾವನ್ನಪ್ಪಿದ್ದ ಯೋಧರಿಬ್ಬರ ದೇಹವನ್ನು ಛಿದ್ರಗೊಳಿಸಿ ಅಮಾನವೀಯತೆ ಮೆರೆದಿದ್ದಾರೆ.  ಜಮ್ಮು ಮತ್ತು  ಕಾಶ್ಮೀರದ ಕೃಷ್ಣಾಘಾಟಿ ಸೆಕ್ಟರ್ ನಲ್ಲಿ ಈ ಘಟನೆ ನಡೆದಿತ್ತು.
ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು, ಮಾರ್ಟರ್, ಶೆಲ್ ಮತ್ತು ಮಷಿನ್ ಗನ್ ಗಳ ಮೂಲಕ ಭಾರತೀಯ ಯೋಧರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ  ಇಬ್ಬರು ಯೋಧರು ಮೃತರಾಗಿದ್ದು, ಮೃತ ಯೋಧರ ಶವಗಳನ್ನು ಪಾಕಿಸ್ತಾನ ಸೇನಾಪಡೆಯ ಯೋಧರು ಛಿದ್ರಗೊಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com