ಆಂಧ್ರ ಪೊಲೀಸ್ ವ್ಯವಸ್ಥೆ ಮೇಲೆ ಪರಿಣಾಮ ಬೀರಿದ ಸೈಬರ್‌ ದಾಳಿ

ಭಾರತ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ನಡೆದ ಸಾಮೂಹಿಕವಾಗಿ ಸೈಬರ್‌ ದಾಳಿಯ ಪರಿಣಾಮ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿಜಯವಾಡ: ಭಾರತ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ನಡೆದ ಸಾಮೂಹಿಕವಾಗಿ ಸೈಬರ್‌ ದಾಳಿಯ ಪರಿಣಾಮ ಆಂಧ್ರಪ್ರದೇಶ ಪೊಲೀಸರ ಬಳಸುತ್ತಿದ್ದ ಶೇ.25ರಷ್ಟು ಕಂಪ್ಯೂಟರ್ ನೆಟ್ ವರ್ಕ್ ಹಾಳಾಗಿದೆ.
ಸೈಬರ್ ದಾಳಿಯನ್ನು ಖಚಿತಪಡಿಸಿರುವ ಆಂಧ್ರಪ್ರದೇಶ ಪೊಲೀಸ್ ಮಹಾ ನಿರ್ದೇಶಕ(ತಂತ್ರಜ್ಞಾನ ಸೇವೆ) ಇ ದಾಮೋದರ್ ಅವರು, ಪೊಲೀಸರು ಬಳಸುತ್ತಿದ್ದ ಶೇ.25ರಷ್ಟು ಕಂಪ್ಯೂಟರ್ ಗಳಿಗೆ ವೈರಸ್ ತಗುಲಿದೆ. ವಿಶೇಷ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.
ಸೈಬರ್ ತಜ್ಞರು ಹ್ಯಾಕ್ ಆಗಿರುವ ಕಂಪ್ಯೂಟರ್ ಗಳನ್ನು ಸರಿಪಡಿಸಲು ಯತ್ನಿಸುತ್ತಿದ್ದು, ಈ ಕುರಿತು ದೆಹಲಿಯಲ್ಲಿರುವ ರಾಷ್ಟ್ರೀಯ ಸೈಬರ್ ಭದ್ರತಾ ಘಟಕಕ್ಕೆ ಮಾಹಿತಿ ನೀಡಲಾಗಿದೆ ಎಂದು ದಾಮೋದರ್ ಅವರು ತಿಳಿಸಿದ್ದಾರೆ.
ಈ ಸೈಬರ್ ದಾಳಿ ಕೇವಲ ಆಂಧ್ರಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರೆ ರಾಜ್ಯಗಳ ಪೊಲೀಸ್ ವ್ಯವಸ್ಥೆ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯಿಂದ ಕದಿಯಲ್ಪಟ್ಟಿರುವ ‘ಸೈಬರ್‌ ಅಸ್ತ್ರ’ಗಳನ್ನು ಬಳಸಿ ಈ ದಾಳಿ ನಡೆಸಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ವೀಡನ್‌, ಬ್ರಿಟನ್‌ ಮತ್ತು ಫ್ರಾನ್ಸ್‌ನಲ್ಲಿ ಮೊದಲು ಸೈಬರ್‌ ದಾಳಿ ನಡೆದ ಬಗ್ಗೆ ಅಮೆರಿಕದ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com