ಪಾಕ್ ಸಲ್ಲಿಸಿದ ಜಾಧವ್ ತಪ್ಪೊಪ್ಪಿಗೆ ವಿಡಿಯೋ ವೀಕ್ಷಿಸಲು ಅಂತರಾಷ್ಟ್ರೀಯ ಕೋರ್ಟ್ ನಕಾರ

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣಕ್ಕೆ....
ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಕಲಾಕೃತಿಯನ್ನು ಕುಲಭೂಷಣ್ ಜಾಧವ್ ಗೆ ಅರ್ಪಿಸಿದ್ದಾರೆ.
ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಕಲಾಕೃತಿಯನ್ನು ಕುಲಭೂಷಣ್ ಜಾಧವ್ ಗೆ ಅರ್ಪಿಸಿದ್ದಾರೆ.
Updated on: 
ಹೇಗ್: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪಾಕ್ ಸಲ್ಲಿಸಿದ ಜಾಧವ್ ತಪ್ಪೊಪ್ಪಿಗೆ ವಿಡಿಯೋವನ್ನು ವೀಕ್ಷಿಸಲು ಕೋರ್ಟ್ ನಿರಾಕರಿಸಿದೆ.
ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ಇಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತಮ್ಮ ವಾದ ಮಂಡಿಸುತ್ತಿದ್ದು, ಮೊದಲು ವಾದ ಮಂಡಿಸಿದ ಭಾರತ, ಈ ಕೂಡಲೇ ಜಾಧವ್ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದೆ. ಅಲ್ಲದೆ ಮಾನವ ಹಕ್ಕುಗಳು ವಿಶ್ವದ ಯಾವುದೇ ಕಡೆಯಲ್ಲಾದರೂ ಅತ್ಯಗತ್ಯವಾಗಿದ್ದು ಅದನ್ನು  ಪಾಕಿಸ್ತಾನ ಗಾಳಿಗೆ ತೂರಿದೆ. ಜಾಧವ್ ಅವರಿಗೆ ದೂತಾವಾಸ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ ಮನವಿಗೆ ಪಾಕಿಸ್ತಾನ ಜಾಣಕಿವುಡು ಪ್ರದರ್ಶಿಸುತ್ತಿದೆ ಎಂದು ಆಪಾದಿಸಿತ್ತು.
ಭಾರತದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ವಿಚಾರಣೆ ಮುಗಿಯುವ ಮೊದಲೇ ಪಾಕಿಸ್ತಾನ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಮಾತ್ರವಲ್ಲ ಪಾಕಿಸ್ತಾನ ವಿಯೆನ್ನಾ ಘೋಷಣೆಯನ್ನು ಉಲ್ಲಂಘಿಸಿದೆ. ಜಾಧವ್ ಸಂಪರ್ಕಿಸಲು ಭಾರತ 16 ಬಾರಿ ಪ್ರಯತ್ನಪಟ್ಟರೂ ಅವಕಾಶ ನೀಡಿಲ್ಲ. ಜತೆಗೆ ಅವರ ತಾಯಿ ಕೇಳಿದಾಗಲೂ ಭೇಟಿ ನಿರಾಕರಿಸಲಾಗಿದೆ. ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ ಮತ್ತು ತುಂಬಾ ತುರ್ತಿನದಾಗಿದೆ ಎಂದು ಹೇಳಿದ್ದಾರೆ.
ಇನ್ನು ಪಾಕಿಸ್ತಾನದ ಪರ ವಾದ ಮಂಡಿಸುತ್ತಿರುವ ದುಬೈ ರಾಯಭಾರಿ ಮೊಝ್ಝಮ್ ಅಹ್ಮದ್ ಖಾನ್ ಅವರು ಭಾರತದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಭಾರತ ಹೇಳುವುದರಲ್ಲಿ ಸುಳ್ಳಿದೆ. ಹಾಗಾಗಿ ಕುಲಭೂಷಣ್ ಜಾಧವ್ ಸ್ವತಃ ತಪ್ಪೊಪ್ಪಿಕೊಂಡಿರುವ ವೀಡಿಯೊವನ್ನು ತಾವು ವೀಕ್ಷಿಸಬೇಕು ಮತ್ತು ಇದರ ಪ್ರಸಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆದರೆ ಕೋರ್ಟ್ ಪಾಕ್ ಮನವಿಯನ್ನು ತಿರಸ್ಕರಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com