2019ರ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ನಾನಿಲ್ಲ: ನಿತೀಶ್ ಕುಮಾರ್

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಯ ಓಟದಲ್ಲಿ ನಾನಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಪಾಟ್ನಾ: ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಯ ಓಟದಲ್ಲಿ ನಾನಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಹೇಳಿದ್ದಾರೆ. 
ಈ ಹುದ್ದೆಗೆ ನನ್ನ ವೈಯಕ್ತಿಕ ಆಸೆ ಇಲ್ಲ ಎಂದು ಸಂಯುಕ್ತ ಜನತಾ ದಳದ ಮುಖಂಡ ಹೇಳಿದ್ದಾರೆ. 
"೨೦೧೯ರ ಲೋಕಸಭಾ ಚುನಾವಣೆಯ ಪ್ರಧಾನಮಂತ್ರಿ ಹುದ್ದೆಗೆ ನಾನು ಅಭ್ಯರ್ಥಿ ಅಲ್ಲ. ನನ್ನದು ಸಣ್ಣ ಪಕ್ಷ. ಬಿಹಾರವನ್ನು ಮುನ್ನಡೆಸಲು ಜನ ನನಗೆ ಅಧಿಕಾರ ನೀಡಿದ್ದಾರೆ" ಎಂದು ನಿತೀಶ್ ಕುಮಾರ್ ಮಾಧ್ಯಮಗಳಿಗೆ ಹೇಳಿದ್ದಾರೆ. 
ಲೋಕಸಭಾ ಚುನಾವಣೆಗೆ ಬಿಜೆಪಿಯೇತರ ಪಕ್ಷಗಳು ಒಟ್ಟುಗೂಡಿ ಮಹಾ ಘಟಬಂಧನವನ್ನು ರಚಿಸುವ ಬಗ್ಗೆ ಪ್ರಶ್ನಿಸಿದಾಗ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳು ಒಗ್ಗೂಡಬೇಕಿದೆ ಎಂದಿದ್ದಾರೆ. 
"ಬಿಹಾರದ ಅದ್ದೂರಿ ಮೈತ್ರಿಯಂತೆ, ರಾಷ್ಟ್ರ ಮಟ್ಟದಲ್ಲೂ ಬಿಜೆಪಿಯೇತರ ಪಕ್ಷಗಳು ಒಗ್ಗೂಡುವ ಅವಶ್ಯಕತೆ ಇದೆ" ಎಂದಿದ್ದಾರೆ ನಿತೀಶ್. 
"ಅದಕ್ಕೆ ಅರ್ಹತೆ ಇದ್ದರೆ ಯಾರು ಬೇಕಾದರೂ ಆ ಹುದ್ದಗೆ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು. ಸರಿಯಾದ ಸಮಯದಲ್ಲಿ ಈ ವಿಷಯ ಜನರ ಎದುರಿಗೆ ಬರಲಿದೆ" ಎಂದು ಅವರು ಹೇಳಿದ್ದಾರೆ. 
"ಜನರ ಬಯಕೆಯಂತೆ ಅವರು ಅದಕ್ಕೆ ಅರ್ಹರಾಗಿದ್ದರಿಂದ ಮೋದಿ ೨೦೧೪ ರ ನಂತರ ಅತ್ಯುನ್ನತ ಹುದ್ದೆಗೆ ಅಭ್ಯರ್ಥಿಯಾಗಿ ಬಂದರು" ಎಂದು ಕೂಡ ನಿತೀಶ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com