ಮೋದಿ ಆಡಳಿತ ದೇಶದಾದ್ಯಂತ ಅಸಹಿಷ್ಣುತೆ ಸೃಷ್ಟಿಸುತ್ತದೆ: ಕಾಂಗ್ರೆಸ್

ಕಳೆದ ಮೂರೂ ವರ್ಷಗಳ ನರೇಂದ್ರ ಮೋದಿ ಸರಕಾರದ ವೈಫಲ್ಯಗಳನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷ, ದೇಶದಾದ್ಯಂತ ಅಸಹಿಷ್ಣುತೆ ಪರಿಸರವನ್ನು ಸೃಷ್ಟಿಸಲಾಗುತ್ತಿದೆ ಎಂದು ಮಂಗಳವಾರ ಆರೋಪಿಸಿದೆ.
ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ
ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ
ನವದೆಹಲಿ: ಕಳೆದ ಮೂರೂ ವರ್ಷಗಳ ನರೇಂದ್ರ ಮೋದಿ ಸರಕಾರದ ವೈಫಲ್ಯಗಳನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷ, ದೇಶದಾದ್ಯಂತ ಅಸಹಿಷ್ಣುತೆ ಪರಿಸರವನ್ನು ಸೃಷ್ಟಿಸಲಾಗುತ್ತಿದೆ ಎಂದು ಮಂಗಳವಾರ ಆರೋಪಿಸಿದೆ. 
"ಈ ಸರ್ಕಾರ ೨೦೧೪ರಲ್ಲಿ ಅಧಿಕಾರಕ್ಕೆ ಬಂದಾಗ ಹೊಸದನ್ನು ಮಾಡುವುದಾಗಿ, ಅಚ್ಛೇ ದಿನ್ ಗಳನ್ನು (ಒಳ್ಳೆಯ ದಿನಗಳನ್ನು) ತರುವುದಾಗಿ ಕನಸನ್ನು ಬಿತ್ತಿತ್ತು. ಅಚ್ಛೇ ದಿನ ತರುವುದರ ಬದಲು, ಈ ದೇಶದ ೧೨೫ ಕೋಟಿ ಜನರ ಕನಸನ್ನು ನುಚ್ಚುನೂರು ಮಾಡಿದೆ" ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. 
"ದೇಶದಲ್ಲಿ ಅಸಹಿಷ್ಣು ಪರಿಸರ ಸೃಷ್ಟಿಸಲಾಗಿದೆ. ಯಾರಾದರೂ ಗಟ್ಟಿಯಾದ ಧ್ವನಿಯೆತ್ತಿ ಚರ್ಚೆ ಮಾಡಿದರೆ ಅವರನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತಿದೆ" ಎಂದು ಸಿಂಧಿಯಾ ಹೇಳಿದ್ದಾರೆ. 
ಜನರು ಏನು ಕಲಿಯಬೇಕು, ಏನು ಓದಬೇಕು ಮತ್ತು ಏನು ತಿನ್ನಬೇಕು ಎಂಬುದನ್ನು ಈ ಸರ್ಕಾರ ಒತ್ತಾಯಪೂರ್ವಕವಾಗಿ ಹೇರುತ್ತಿದೆ ಎಂದು ಸಿಂಧಿಯಾ ಆರೋಪಿಸಿದ್ದಾರೆ. 
"ದೇಶದಲ್ಲಿ ದಲಿತ ವಿರೋಧಿ ಪರಿಸರವನ್ನು ಸೃಷ್ಟಿಸಲಾಗಿದೆ. ಒಂದು ಕಡೆ ಈ ಸರ್ಕಾರ ಅಂಬೇಡ್ಕರ್ ಜಯಂತಿ ಆಚರಿಸುವುದಕ್ಕೆ ಕರೆ ಕೊಡುತ್ತದೆ ಮತ್ತೊಂದು ಕಡೆ ಪ್ರತಿದಿನ ದೇಶದಾದ್ಯಂತ ದಲಿತರ ಮೇಲೆ ದೌರ್ಜನ್ಯ ಎಸಗುವ ಪರಿಸರವನ್ನು ಹುಟ್ಟಿಸಿದೆ. ನನ್ನ ರಾಜ್ಯವಾದ ಮಧ್ಯಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದ ೫೦ ಜನ ಮೃತಪಡುವ ಇರಾದೆ ವ್ಯಕ್ತಪಡಿಸಿದ್ದಾರೆ. ಅವರಿಗಾಗಿ ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಆದರೆ ಪ್ರಧಾನಿಯವರಿಗೆ (ನರೇಂದ್ರ ಮೋದಿ) ದಲಿತ ಮುಕ್ತ ಮತ್ತು ಆದಿವಾಸಿ ಮುಕ್ತ ಭಾರತ ಬೇಕಾಗಿದೆ" ಎಂದು ಕೂಡ ಅವರು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com