ರಾಜಸ್ಥಾನದಲ್ಲಿ ಐ ಎಸ್ ಐ ಏಜೆಂಟ್ ಬಂಧನ

ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವಿಸಸ್ ಇಂಟಲಿಜೆನ್ಸ್ (ಐ ಎಸ್ ಐ) ಏಜೆಂಟ್ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸ್ ಗುಪ್ತಚರ ದಳ ಮತ್ತು ಸೇನಾ ಗುಪ್ತಚರ ದಳ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಪುರ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವಿಸಸ್ ಇಂಟಲಿಜೆನ್ಸ್ (ಐ ಎಸ್ ಐ) ಏಜೆಂಟ್ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸ್ ಗುಪ್ತಚರ ದಳ ಮತ್ತು ಸೇನಾ ಗುಪ್ತಚರ ದಳ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ಶನಿವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಬೇಹುಗಾರಿಕಾ ಮಾಹಿತಿಯನ್ನು ಅನುಸರಿಸಿ ಜೈಸಲ್ಮೇರ್ ನ ಕುಂಜರಿ ಗ್ರಾಮದಿಂದ ಹಾಜಿ ಖಾನ್ ಎಂಬುವವರನ್ನು ಬಂಧಿಸಲಾಗಿದೆ. 
ಐ ಎಸ್ ಐ ಗೆ ಗುಪ್ತ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಖಾನ್ ನನ್ನ ಬಂಧಿಸಲಾಗಿದ್ದು, ಮುಂದಿನ ವಿಚಾರಣೆಗಾಗಿ ಜೋದ್ಪುರಕ್ಕೆ ಕಳುಹಿಸಲಾಗಿದೆ ಎಂದು ರಾಜಾಸ್ಥಾನ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಈ ವ್ಯಕ್ತಿಯಿಂದ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿಯೂ ಅವರು ಹೇಳಿದ್ದಾರೆ. 
"ಕೆಲವು ತಿಂಗಳುಗಳ ಹಿಂದೆಯೇ ಖಾನ್ ನನ್ನ ಬಂಧಿಸಲಾಗಿತ್ತು ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು" ಎಂದಿರುವ ಅಧಿಕಾರಿ "ಇವರು ನಿರಂತರವಾಗಿ ತಮ್ಮ ಸಂಬಂಧಿ ಮನೆಗೆ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದರು" ಎಂದು ಕೂಡ ತಿಳಿಸಿದ್ದಾರೆ. 
ಭಾರತೀಯ ವಾಯುಮಾನ ಪಡೆ ಹಲವು ಪರೀಕ್ಷೆಗಳನ್ನು ನಡೆಸುವ ಜಾಗಕ್ಕೆ ಸನಿಹವಾಗಿರುವ ಕುಂಜರಿಯಲ್ಲಿ ಈ ವ್ಯಕ್ತಿ ನೆಲೆಸಿದ್ದು, ಸೇನೆ ಮತ್ತು ವಾಯುಪಡೆಯ ವಿಷಯಗಳ ಮೇಲೆ ಬೇಹುಗಾರಿಕೆ ನಡೆಸಿ ಐ ಎಸ್ ಐ ಗೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com