ಸಲಿಂಗ ವಿವಾಹವನ್ನು ಕಾನೂನು ಮಾನ್ಯ ಮಾಡಿದ ತೈವಾನ್; ಏಷ್ಯಾದಲ್ಲಿಯೇ ಮೊದಲ ದೇಶ!

ಸಲಿಂಗ ವಿವಾಹದ ಪರವಾಗಿ ತೈವಾನ್ ನ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಬುಧವಾರ ಹೊರಹೊಮ್ಮಿರುವ ಈ ಚಾರಿತ್ರಿಕ ತೀರ್ಪಿನಿಂದ, ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿದ ಮೊದಲ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತೈಪೆ: ಸಲಿಂಗ ವಿವಾಹದ ಪರವಾಗಿ ತೈವಾನ್ ನ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಬುಧವಾರ ಹೊರಹೊಮ್ಮಿರುವ ಈ ಚಾರಿತ್ರಿಕ ತೀರ್ಪಿನಿಂದ, ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿದ ಮೊದಲ ಏಷ್ಯಾ ದೇಶವಾಗಿ ಈ ದ್ವೀಪ ಹೆಗ್ಗಳಿಕೆ ಗಳಿಸಿದೆ. 
ತೈವಾನ್ ನ ಸದ್ಯದ ನಾಗರಿಕ ಸಂಹಿತೆಯಲ್ಲಿ ಪುರುಷ ಮತ್ತು ಮಹಿಳೆಯ ನಡುವಿನ ವಿವಾಹಕ್ಕಷ್ಟೇ ಮಾನ್ಯತೆ ಇದ್ದು ಇದು ಸಂವಿಧಾನ ಭರವಸೆ ನೀಡುವ ಇಚ್ಚಾಪೂರ್ವ ವಿವಾಹ ಮತ್ತು ಜನರ ಸಮಾನತೆಯನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ತಿಳಿಸಿದೆ. 
ಈ ಆದೇಶವನ್ನು ಜಾರಿಗೊಳಿಸಲು ತೈವಾನ್ ಸರ್ಕಾರಕ್ಕೆ ಕೋರ್ಟ್ ೨ ವರ್ಷಗಳ ಅವಕಾಶ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com