ಜಾಧವ್ ಬಿಡುಗಡೆ ಎಂದಿಗೂ ಸಾಧ್ಯವಿಲ್ಲ: ಪಾಕಿಸ್ತಾನಿ ವಕೀಲ

ಪಾಕಿಸ್ತಾನ ಸೇನಾ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ, ಭಾರತೀಯ ಗೂಢಾಚಾರಿ ಎಂಬ ಆರೋಪ ಎದುರಿಸುತ್ತಿರುವ ಕುಲಭೂಷಣ್ ಜಾಧವ್ ಅವರನ್ನು 'ಬಿಡುಗಡೆ ಮಾಡಲು ಸಾಧ್ಯವಿಲ್ಲ
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
ಇಸ್ಲಮಾಬಾದ್: ಪಾಕಿಸ್ತಾನ ಸೇನಾ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ, ಭಾರತೀಯ ಗೂಢಾಚಾರಿ ಎಂಬ ಆರೋಪ ಎದುರಿಸುತ್ತಿರುವ ಕುಲಭೂಷಣ್ ಜಾಧವ್ ಅವರನ್ನು 'ಬಿಡುಗಡೆ ಮಾಡಲು ಸಾಧ್ಯವಿಲ್ಲ ಅಥವಾ ನಿರ್ದೋಷಿ ಎಂದು ಸಾಬೀತುಪಡಿಸಲು ಅಸಾಧ್ಯ' ಎಂದು ಪಾಕಿಸ್ತಾನಿ ವಕೀಲ ಸೋಮವಾರ ಹೇಳಿದ್ದಾರೆ. 
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವ ವಕೀಲ ಖವಾರ್ ಖುರೇಷಿ, ಐಸಿಜೆ ಅವರನ್ನು ನಿರ್ದೋಷಿ ಎಂದು ಹೇಳುವುದು ಇಲ್ಲ ಅಥವಾ ಬಿಡುಗಡೆಯನ್ನು ಮಾಡುವುದಿಲ್ಲ ಎಂದಿದ್ದಾರೆ.
"ಜಾಧವ್ ಪ್ರಕರಣ ಸ್ಪಷ್ಟವಾದದ್ದು. ಜಾಧವ್ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಅಥವಾ ನಿರ್ದೋಷಿ ಎಂದು ಸಾಬೀತುಪಡಿಸಲು ಅಸಾಧ್ಯ" ಎಂದು ಅವರು ಹೇಳಿರುವುದಾಗಿ ದ ನೇಶನ್ ಪತ್ರಿಕೆ ವರದಿ ಮಾಡಿದೆ. 
ಪಾಕಿಸ್ತಾನ ಮಾಧ್ಯಮಗಳಿಗೂ ಕಿವಿಮಾತು ಹೇಳಿರುವ ಖುರೇಷಿ "ಜವಾಬ್ದಾರಿಯಿಂದ ವರ್ತಿಸಿ ಮತ್ತು ಪಾಕಿಸ್ತಾನಿ ಅಧಿಕಾರಿಗಳಿಗೆ ಸಿಕ್ಕಬೇಕಾದ ಗೌರವವನ್ನು ನೀಡಿ" ಎಂದಿದ್ದಾರೆ. 
ಗೂಢಚರ್ಯೆ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದನೆಯ ಕುಮ್ಮಕ್ಕು ಆರೋಪಗಳನ್ನು ಎದುರಿಸುತ್ತಿರುವ ಜಾಧವ್ ಅವರನ್ನು ಗಲ್ಲಿಗೆ ಏರಿಸಿದಂತೆ ಐಸಿಜೆ ಆದೇಶ ನೀಡಿದ ಮೇಲೆ ಪಾಕಿಸ್ತಾನಿ ವಕೀಲರ ಮೇಲೆ ವ್ಯಾಪಕ ಟೀಕೆ ಹರಿದುಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com