ಪೆಟ್ರೊಲ್ ಬಂಕ್ ಲೈಸೆನ್ಸ್ ಕಳೆದುಕೊಳ್ಳುವ ಭೀತಿಯಲ್ಲಿ ಲಾಲು ಪುತ್ರ ತೇಜ್ ಪ್ರತಾಪ್

ಪೆಟ್ರೋಲ್ ಪಂಪ್ ಪರವಾನಗಿಗಾಗಿ ಭೂಮಿಯ ಬಗ್ಗೆ ಸುಳ್ಳು ಮಾಹಿತ ನೀಡಿರುವ ಕಾರಣ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ ಆರೋಗ್ಯ ...
ತೇಜ ಪ್ರತಾಪ್
ತೇಜ ಪ್ರತಾಪ್
ಪಟ್ನಾ: ಪೆಟ್ರೋಲ್ ಪಂಪ್ ಪರವಾನಗಿಗಾಗಿ ಭೂಮಿಯ ಬಗ್ಗೆ ಸುಳ್ಳು ಮಾಹಿತ ನೀಡಿರುವ ಕಾರಣ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ ಆರೋಗ್ಯ ಸಚಿವ ತೇಜ ಪ್ರತಾಪ್ ಪೆಟ್ರೋಲ್ ಪಂಪ್ ಲೈಸೆನ್ಸ್ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ..
2012 ರಲ್ಲಿ  ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ತೇಜ ಪ್ರತಾರ್ ಗೆ ಪೆಟ್ರೋಲ್ ಪಂಪ್ ಹಂಚಿಕೆ ಮಾಡಿತ್ತು. ಈ ವೇಳೆ ಪಂಪ್ ಸ್ಥಾಪನೆಗಾಗಿ ಭೂಮಿಯ ಬಗ್ಗೆ ತೇಜ್ ಪ್ರತಾಪ್ ಸುಳ್ಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ  ತೇಜ್ ಪ್ರತಾಪ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದರಲ್ಲಿ ನಿಯಮಾವಳಿ ಉಲ್ಲಂಘನೆ ಬಗ್ಗೆ ವಿವರಿಸಲಾಗಿದೆ. 
ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ತೇಜ ಪ್ರತಾಪ್ ಪೆಟ್ರೋಲ್ ಪಂಪ್ ಲೈಸೆನ್ಸ್ ಪಡೆದಿದ್ದಾರೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದರು. ತೇಜ್ ಪ್ರತಾಪ್ ಮಾಲೀಕತ್ವದ ಪೆಟ್ರೋಲ್ ಪಂಪ್ ಬ್ಯೂರ್ ಪ್ರದೇಶದ ನ್ಯೂ ಬೈಪಾಸ್ ರಸ್ತೆಯಲ್ಲಿದೆ.
9 ಅಂಶಗಳನ್ನೊಳಗೊಂಡಿರುವ ಶೋಕಾಸ್ ನೋಟಿಸ್ ನಲ್ಲಿ , 15 ದಿನಗಳೊಳಗೆ ಲಿಖಿತ ಉತ್ತರ ನೀಡುವಂತೆ ತೇಜ ಪ್ರತಾಪ್ ಗೆ ಸೂಚಿಸಲಾಗಿದೆ. ಬಿಪಿಸಿಎಲ್ ಮ್ಯಾನೇಜರ್ ಮನೀಶ್ ಕುಮಾರ್ ನೋಟೀಸ್ ಗೆ ಸಹಿ ಮಾಡಿದ್ದಾರೆ.
ತೇಜ್ ಪ್ರತಾಪ್ ಬಿಹಾರ ಸರ್ಕಾರದಲ್ಲಿ ಸಚಿವರಾಗಿರುವ ಕಾರಣ ಪೆಟ್ರೋಲ್ ಪಂಪ್ ಹೊಂಡುವಂತಿಲ್ಲ ಎಂದು ನೋಟೀಸ್ ನಲ್ಲಿ ಹೇಳಲಾಗಿದೆ. ಪೆಟ್ರೋಲ್ ಪಂಪ್ ಪಡೆಯಲು ಇರುವ ಮಾರ್ಗ ಸೂಚಿಗಳನ್ನು ತೇಜ ಪ್ರತಾಪ್ ಉಲ್ಲಂಘಿಸಿದ್ದಾರೆ, ತಾವು ಪೆಟ್ರೋಲ್ ಬಂಕ್ ಗಾಗಿ ಜಮೀನು ಹೊಂದಿರುವುದಾಗಿ ತೇಜ್ ಪ್ರತಾಪ್ ಹೇಳಿದ್ದಾರೆ. ಆದರೆ ಭೂಮಿಯ ನಿಜವಾದ ಮಾಲೀಕ ಎ.ಕ ಇನ್ಫೋ ಸಿಸ್ಟಮ್ ಭೂಮಿಯನ್ನು ಲೀಸ್ ಗೆ ಕೊಟ್ಟಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com